Advertisement

ಅಂಗನವಾಡಿ ವ್ಯವಸ್ಥೆಗಿಲ್ಲ ಪೆಟ್ಟು

06:56 PM Oct 09, 2020 | Suhan S |

ವಿಜಯಪುರ: 21ನೇ ಶತಮಾನದಲ್ಲಿ ಭವಿಷ್ಯದ ಪೀಳಿಗೆಗೆ ಅಗತ್ಯವಿರುವ ಕೌಶಲ್ಯ ಬೆಳೆಸಲು ಮಕ್ಕಳನ್ನು ಸ್ಫೂ ರ್ತಿ ದಾಯಕ ಚಿಂತನೆಗೆ ಹಚ್ಚಬೇಕು. “ಓದಲು ಕಲಿ, ನಂತರ ಕಲಿಯಲು ಓದು’ ಎಂಬ ತತ್ವ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಆಶಯ. ಇದಕ್ಕಾಗಿ ಪಾಲಕರು,ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನನೀಡಬೇಕು ಎಂದು ರಾಷ್ಟ್ರೀಯ ಶಿಕ್ಷಣನೀತಿ-2020ರ ಕಾರ್ಯಪಡೆ ಸದಸ್ಯರಾದಮೇಲ್ಮನೆ ಸದಸ್ಯ ಅರುಣ ಶಹಾಪುರ ಹೇಳಿದರು.

Advertisement

ನಗರದ ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವೆಬಿನಾರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಶೈಶವಾವಸ್ಥೆಯಲ್ಲಿ ಅತೀ ಹೆಚ್ಚು ಚುರುಕಾಗಿರುತ್ತಾರೆ. ಕಲಿಯುವ ಶಕ್ತಿ ಅವರಲ್ಲಿ ಅಗಾಧವಾಗಿರುತ್ತದೆ. ಆದ್ದರಿಂದ ಶಿಕ್ಷಣ ನೀತಿಯಲ್ಲಿ ಮಕ್ಕಳಶೈಶವಾವಸ್ಥೆ ಕಲಿಕೆಗೆ ಅತೀ ಹೆಚ್ಚು ಒತ್ತು ನೀಡಲಾಗಿದೆ. ನಾವು ಏನು ಚಿಂತಿಸಬೇಕು ಎಂಬುದಕ್ಕಿಂತ ಹೇಗೆ ಚಿಂತಿಸಬೇಕು ಎಂಬುದನ್ನು ಕಲಿಸಬೇಕು ಎಂದು ಮೋದಿಅವರು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ನೀತಿ ಜಾರಿಗೆ ಮುಂದಾಗಿದ್ದಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜನರ ಸಲಹೆಗಳನ್ನು ಪಡೆದು ತಯಾರಾದ ನೀತಿ. ಇದರಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಕಳೆದ 34 ವರ್ಷಗಳಿಂದ ಶೈಕ್ಷಣಿಕ ನೀತಿಯಲ್ಲಿ ಯಾವುದೇ ನೀತಿಗಳು ಜಾರಿಗೆ ಬಂದಿರಲಿಲ್ಲ. ಈಗ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಅವರ ನೇತೃತ್ವದಲ್ಲಿ ಈ ನೀತಿಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ವ್ಯವಸ್ಥೆಗೆ ಪೆಟ್ಟು ಬೀಳಲಿದೆ ಎಂಬ ಆತಂಕ ಕಾರ್ಯಕರ್ತೆಯರಿಗೆ ಬೇಡ. ಅಂಗನವಾಡಿ ಕಾರ್ಯಕರ್ತೆಯರಿಗೆತರಬೇತಿ ನೀಡಿ ಅವರನ್ನು ಶಿಕ್ಷಕರನ್ನಾಗಿಪರಿವರ್ತಿಸುವ ಉದ್ದೇಶ ಹೊಂದಿದೆ.ಅಂಗನವಾಡಿ ಕಾರ್ಯಕರ್ತೆಯರುಇನ್ನು ಶಿಕ್ಷಕಿ ಎನಿಸಿಕೊಳ್ಳಲಿದ್ದಾರೆ. ಔಪಚಾರಿಕ ಶಿಕ್ಷಣ ದೊರಕಿಸುವ ಆಶಯ ಹೊಂದಲಾಗಿದೆ. ತಳಮಟ್ಟದಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಇದರ ಆಶಯ ಎಂದರು.

Advertisement

ಕುಲಪತಿ ಪ್ರೊ| ಓಂಕಾರ ಕಾಕಡೆ, ಕುಲಸಚಿವೆ ಪ್ರೊ| ಆರ್‌. ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ|ಪಿ.ಜಿ. ತಡಸದ ಮಾತನಾಡಿದರು. ಐಕ್ಯೂಎಸಿ ಸಹಾಯಕ ನಿರ್ದೇಶಕ ಮಠಪತಿ ಸ್ವಾಗತಿಸಿದರು. ರೇಣುಕಾ ಮೇಟಿ ನಿರೂಪಿಸಿದರು. ರೋಹಿಣಿಭೂಸನೂರಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next