ಉಡುಪಿ: ರಾಷ್ಟ್ರೀಯ ಶಿಕ್ಷಣನೀತಿ(ಎನ್‌ಇಪಿ)ಯ ಹೆಸರು ಬದಲಾಯಿಸಿದಾಕ್ಷ ಣ ಯಾವುದೇ ಪರಿವರ್ತನೆ ಯಾಗುವುದಿಲ್ಲ. ಸರಕಾರಗಳು ನೀತಿ ರೂಪಿಸಬಹುದೇ ವಿನಃ ಪಠ್ಯಕ್ರಮವನ್ನು ಶಿಕ್ಷಕರೇ ರೂಪಿಸಬೇಕಾಗುತ್ತದೆ. ಅಂತಿ ಮವಾಗಿ ಸರಕಾರವು ಶಿಕ್ಷಕರು ಅಥವಾ ಪ್ರಾಧ್ಯಾಪಕರ ಮೂಲಕವೇ ಪಠ್ಯಕ್ರಮ ರಚಿಸಬೇಕಾಗುತ್ತದೆ.
ಎನ್‌ಇಪಿಯನ್ನು ಇನ್ನಷ್ಟು ಉತ್ತಮಗೊಳಿಸುವತ್ತ ಸರಕಾರ ಗಳು ಚಿಂತನೆ ನಡೆಸಬೇಕು ಎಂದು ಬೆಂಗಳೂರು ವಿ.ವಿ.
ವಿಶ್ರಾಂತ ಕುಲಪತಿ ಪ್ರೊ| ವೇಣುಗೋಪಾಲ್ ಕೆ.ಆರ್. ಅಭಿಪ್ರಾಯ ವ್ಯಕ್ತಪಡಿಸಿದರು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಶನಿವಾರ ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ -2020 ಶಿಕ್ಷಣ ತಜ್ಞರ ವಿಶೇಷ ಸಭೆ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ, ಕರ್ನಾಟಕ ಅಥವಾ ಗ್ಲೋಬಲ್ ಶಿಕ್ಷಣ ನೀತಿಯೆಂದೂ ಹೆಸರು ಬದಲಿಸ ಬಹುದು. ಆದರೆ ಪಠ್ಯಕ್ರಮದಲ್ಲಿ ಬದಲಾವಣೆ ಅಷ್ಟು ಸುಲಭವಿಲ್ಲ. ಯುಜಿಸಿ ಸಹಿತ ವಿವಿಧ ಶಿಕ್ಷಣ ಮಂಡಳಿಗಳು ಪಠ್ಯಕ್ರಮ ರಚನೆ ನೋಡಿಕೊಳ್ಳು ತ್ತಿವೆ. ಹೀಗಾಗಿ ಎನ್‌ಇಪಿಗೆ ಅನುಗುಣವಾಗಿ ರಾಜ್ಯ ನೀತಿ ರೂಪಿಸಬೇಕಾಗುತ್ತದೆ. ಎನ್‌ಇಪಿಯಲ್ಲಿ ಮುಕ್ತ ಅವಕಾಶ ಸಾಕಷ್ಟಿದೆ. ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬುದನ್ನು ಒತ್ತಿ ಹೇಳುತ್ತದೆ ಎಂದರು.
ಹೊಸ ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಅದರಿಂದ ಆಗಬಹುದಾದ ಅನುಕೂಲ, ಶಿಕ್ಷಣ ಸಂಸ್ಥೆಗಳು ಸ್ವಾಯತ್ತೆ ಪಡೆಯುವುದು, ವಿದೇಶಿ ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಆರಂಭಿಸುವುದು, ಕೃತಕ ಬುದ್ಧಿಮತ್ತೆ ಯಾವ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾವ ಬೀರಲಿದೆ ಹಾಗೂ ಭವಿಷ್ಯದಲ್ಲಿ ಪರೀಕ್ಷೆಯ ಪರಿಕಲ್ಪನೆ ಹೇಗಿರಲಿದೆ ಮತ್ತು ಮುಂದೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕೌಶಲ ಕೇಂದ್ರ ಬರಲಿದೆ ಎಂಬುದನ್ನು ವಿವರಿಸಿದರು.
ಶಿಕ್ಷಣ ವಿಶ್ಲೇಷಕ ಪ್ರದೀಪ್ ತುಮಕೂರು ಹಾಗೂ ಜ್ಞಾನಸುಧಾ ಸಂಸ್ಥೆಗಳ ಸಂಸ್ಥಾಪಕ ಡಾ| ಸುಧಾಕರ್ ಶೆಟ್ಟಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದರು. ಟ್ಯಾಪ್ಮಿ ಪ್ರಾಧ್ಯಾಪಕ ಪ್ರೊ| ನಂದನ್ ಪ್ರಭು ಪ್ರಸ್ತಾವನೆಗೈದರು. ಪೀಪಲ್ ಫೋರಂನ ಉಡುಪಿ ಸಂಚಾಲಕ ಗೋಪಾಲಕೃಷ್ಣ ಭಟ್ ಎನ್.ಎಸ್. ಸ್ವಾಗತಿಸಿ, ಶ್ರೀವತ್ಸ ವಂದಿಸಿದರು. ರಾಜಶಂಕರ್ ಅತಿಥಿ ಪರಿಚಯ ಮಾಡಿದರು. ನಿಧಿ ಪೈ ನಿರೂಪಿಸಿದರು.