Advertisement

ಉದ್ಯೋಗದಾತರ ಸೃಷ್ಟಿ: ಹೊಸ ಶಿಕ್ಷಣ ನೀತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ

02:01 AM Aug 02, 2020 | Hari Prasad |

ಹೊಸದಿಲ್ಲಿ: ಉದ್ಯೋಗ ಸೃಷ್ಟಿಸುವವರನ್ನು ರೂಪಿಸುವುದೇ ನೂತನ ಶಿಕ್ಷಣ ನೀತಿಯ ಗುರಿ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

Advertisement

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್‌ ಫಿನಾಲೆ ವೇಳೆ ವಿದ್ಯಾರ್ಥಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಪ್ರಧಾನಿ, ಹೊಸ ಶಿಕ್ಷಣ ನೀತಿಯ ಅಂಶಗಳ ಬಗ್ಗೆ ವಿವರಿಸಿದ್ದಾರೆ. 21ನೇ ಶತಮಾನ ಜ್ಞಾನದ ಯುಗ.

ಈ ವೇಳೆ ಕಲಿಕೆ, ಸಂಶೋಧನೆ ಮತ್ತು ನಾವೀನ್ಯಕ್ಕೆ ಒತ್ತು ನೀಡಬೇಕಿದೆ. ಇದನ್ನು ಮುಖ್ಯವಾಗಿರಿಸಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಈ ಶಿಕ್ಷಣ ನೀತಿಯು ಉದ್ಯೋಗದಾತರನ್ನು ಸೃಷ್ಟಿಸಲಿದೆ ಎಂದಿದ್ದಾರೆ.

ಸದ್ಯ ಈ ವರ್ಷದ ಹ್ಯಾಕಥಾನ್‌ನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಗ್ರ್ಯಾಂಡ್‌ ಫಿನಾಲೆಯು ಆ.1ರಿಂದ ಆರಂಭವಾಗಿ ಆ.3ಕ್ಕೆ ಅಂತ್ಯವಾಗಲಿದೆ.

ಶಿಕ್ಷಣದ ಹೇರಿಕೆ ಇಲ್ಲ
ಹೊಸ ಶಿಕ್ಷಣ ನೀತಿ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟ ಮೋದಿ, ವಿದ್ಯಾರ್ಥಿಗಳ ಆಯ್ಕೆಗೆ ಅನುಗುಣವಾಗಿ ಕಲಿಯಬಹುದಾಗಿದೆ, ಶಿಕ್ಷಣದ ಹೇರಿಕೆಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

Advertisement

ವಿದ್ಯಾರ್ಥಿಗಳು ಬ್ಯಾಗ್‌ ಹೊರೆಯಿಂದ ಮುಕ್ತರಾಗಲಿದ್ದಾರೆ. ಉತ್ತಮ ಜೀವನ ವಿಧಾನ, ಸುಲಭವಾಗಿ ನೆನಪಿಡಬಹುದಾದ ಅಧ್ಯಯನ ಮತ್ತು ಅತ್ಯುತ್ಕೃಷ್ಟ ಚಿಂತನೆಗೆ ಈ ನೀತಿ ಪ್ರೋತ್ಸಾಹ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next