Advertisement

ಬ್ರಹ್ಮಾವರ: 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್‌ ಸ್ಪರ್ಧೆಗೆ ಚಾಲನೆ

01:27 AM Feb 24, 2023 | Team Udayavani |

ಬ್ರಹ್ಮಾವರ: ಕರಾವಳಿ ಭಾಗದ ಜನರು ಜಲ ಸಾಹಸ ಕ್ರೀಡೆಯಲ್ಲಿ ಸಹಜವಾಗಿ ನೈಸರ್ಗಿಕ ಶಕ್ತಿ ಹೊಂದಿರುತ್ತಾರೆ. ಪೂರಕವಾಗಿ ತಾಂತ್ರಿಕ ತರಬೇತಿ ಮತ್ತು ಉತ್ತೇಜನ ನೀಡಿದಲ್ಲಿ ಉತ್ತಮ ಫಲಿತಾಂಶ ಸಾಧ್ಯ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಅವರು ಇಲ್ಲಿನ ಉಪ್ಪೂರು ಮಡಿಸಾಲು ಹೊಳೆ ಸೇತುವೆ ಬಳಿ ಗುರುವಾರ ಜಿಲ್ಲಾಡಳಿತ, ಜಿ.ಪಂ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಯಾಕಿಂಗ್‌ ಮತ್ತು ಕನೂಯಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಫೆ. 23ರಿಂದ 26ರ ವರೆಗೆ ನಡೆಯುವ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್‌ ಚಾಂಪಿಯನ್‌ಶಿಪ್‌ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಪಂದ್ಯಾಟ ನಡೆಯುತ್ತಿದೆ ಎಂದರು.

ಅತಿಥಿಗಳಾಗಿ ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಮಾಹೆ ಸಹ ಕುಲಾಧಿಪತಿ ಪ್ರೊ| ಎಚ್‌.ಎಸ್‌. ಬಲ್ಲಾಳ್‌, ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಕಯಾಕಿಂಗ್‌ ಮತ್ತು ಕನೂಯಿಂಗ್‌ ಅಸೋಸಿಯೇಶನ್‌ನ ಪ್ರಮುಖರಾದ ಪ್ರಶಾಂತ್‌ ಕುಶ್ವಾ, ಡಾ| ಭಗÌತ್‌ಸಿನ್ಹ ವನಾರ್‌, ಎಂ.ಎನ್‌. ದೇವಯ್ಯ, ದಿಲೀಪ್‌ ಕುಮಾರ್‌,
ಟೀಮ್‌ ಕ್ಯಾಪ್ಟನ್‌ ಮಂಜಿತ್‌ ಸಿಂಗ್‌, ಸ್ಥಳೀಯ ಪಂಚಾಯತ್‌ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಬೇಬಿ ಪೂಜಾರಿ, ಮಹೇಶ್‌ ಕೋಟ್ಯಾನ್‌, ಪಂದ್ಯಾವಳಿಯ ಸ್ವಾಗತ ಸಮಿತಿ ಅಧ್ಯಕ್ಷ ಬಿರ್ತಿ ರಾಜೇಶ್‌ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಪಂದ್ಯದಲ್ಲಿ 16 ರಾಜ್ಯಗಳಿಂದ 480 ಪುರುಷರು, 107 ಮಹಿಳೆಯರು ಭಾಗವಹಿಸುತ್ತಿದ್ದಾರೆ. 200 ಮೀ., 500 ಮೀ., 2 ಕಿ.ಮೀ. ದೂರದ 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next