ಮೈಸೂರು: ರಾಷ್ಟ್ರೀಯ ಡೆಂಘೀ ದಿನದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿವತಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಕೃಷ್ಣಮೂರ್ತಿಪುರಂನ ಪ್ರಾಥಮಿಕಆರೋಗ್ಯ ಕೇಂದ್ರದ ಆವರಣದಲ್ಲಿ ಜಾಗೃತಿ ಜಾಥಾಗೆ ಜಿಲ್ಲಾ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಎಚ್.ಪ್ರಸಾದ್ ಚಾಲನೆ ನೀಡಿ, ಮಳೆಗಾಲ ಆರಂಭವಾದ ಕೂಡಲೇ ಡೆಂಘೀ ಹೆಚ್ಚಲಿದೆ. ಅದಕ್ಕಾಗಿ ನಾವು ಮೊದಲೇ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಯಾರೂ ಡೆಂಘೀಯಿಂದ ಮರಣ ಹೊಂದ ಬಾರದು ಎನ್ನುವುದೇ ನಮ್ಮ ಗುರಿ ಎಂದರು.
139 ಪ್ರಕರಣಗಳು ವರದಿ: ಜಿಲ್ಲೆಯಲ್ಲಿ ಇದುವರೆಗೆ 139 ಪ್ರಕರಣಗಳು ವರದಿಯಾಗಿವೆ. ಶೇ.80ರಿಂದ 85ರಷ್ಟು ನಗರಪ್ರದೇಶ ಮತ್ತು ಮೈಸೂರು ಗ್ರಾಮಾಂತರದಲ್ಲಿ ಕಂಡು ಬಂದಿದ್ದು,ಉಳಿದ ಕಡೆಗಳಲ್ಲಿ ತುಂಬಾ ಕಡಿಮೆ ಇದೆ.ನೀರನ್ನು ತೊಟ್ಟಿಗಳಲ್ಲಿ ಶೇಖರಣೆ ಮಾಡಬಾರದು. ಒಂದು ವೇಳೆ ಮಾಡಿದರೂ ಅದನ್ನು
ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾರಕ್ಕೊಮ್ಮೆ ನೀರು ಶೇಖರಿಸುವ ವಸ್ತುಗಳನ್ನು ಸ್ವಚ್ಛಗೊಳಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮ: ಕೇರಳದಿಂದ ಮೈಸೂರುಗೆ ಬರುವ ಬಾವಲಿ ಗಡಿಯಲ್ಲಿ ಕೊರೊನಾ ಮುನ್ನೆಚ್ಚರಿಕೆ ವಹಿಸಿದ ಅನುಭವವಿದೆ. ಟೊಮಾಟೋ ಜ್ವರಕ್ಕೂ ಅದೇ ರೀತಿಯಮುನ್ನೆಚ್ಚರಿಕೆ ವಹಿಸಿದ್ದು, ನಮ್ಮ ತಂಡ ಸ್ಥಳದಲ್ಲಿದೆ. ಅವರಿಗೆ ಈ ಕುರಿತು ಜಾಗೃತಿ ಮೂಡಿಸಿದ್ದೇವೆ. ಅವರು ಪ್ರತಿದಿನ ನಮಗೆ ವರದಿ ಕೊಡುತ್ತಿದ್ದಾರೆ.ಐದು ವರ್ಷಕ್ಕಿಂತ ಚಿಕ್ಕ ಮಕ್ಕಳ ತಪಾಸಣೆ ನಡೆಯುತ್ತಿದೆ. ಅಲ್ಲಿಂದ ಬರುವ ಚಿಕ್ಕಮಕ್ಕಳ ತಪಾಸಣೆ ನಡೆಯುತ್ತಿದೆ. ಜ್ವರದ ವೈರಸ್ ನಮ್ಮಲ್ಲಿಲ್ಲ. ಮುನ್ನೆಚ್ಚರಿಕೆಯಾಗಿ ಶಾಲೆಯಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರಂ ಸೇರಿದಂತೆಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.