Advertisement
ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸಾಂಖ್ಯಿಕ ಸಂಸ್ಥೆಗಳ ಒಕ್ಕೂಟದ 25ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಸ್ತುನಿಷ್ಠ ಸಾಂಖ್ಯಿಕ ವಿವರವು ನೀತಿ ನಿರೂಪಣೆ, ಯೋಜನೆ ಅನುಷ್ಠಾನ, ಶ್ರೇಯಾಂಕ ಸ್ಥಿತಿಗತಿ ತಿಳಿಯಲು ಉಪಯುಕ್ತವೆನಿಸಿದೆ.
Related Articles
Advertisement
ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣ, ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಸಾಂಖ್ಯಿಕ ವಿವರಗಳು ಮುಂದೆ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಹೊಸ ಪ್ರಯೋಗಕ್ಕೂ ಅನುಕೂಲ: ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಂ.ಆರ್. ಸೀತಾರಾಂ ಮಾತನಾಡಿ, ಆಡಳಿತಾತ್ಮಕ ದಾಖಲೆ ರಾಜ್ಯಗಳ ಸ್ಥಿತಿಗತಿ, ಹೊಸ ಪ್ರಯೋಗಗಳ ಕುರಿತು ತಿಳಿಯಲು ಸಹಕಾರಿ ಎನಿಸಿವೆ. ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ನಿರ್ವಹಣೆಗೂ ಉಪಯುಕ್ತವಾಗಿದೆ.
ಹಾಗೆಯೇ ಸಾಂಖ್ಯಿಕ ವಿವರ ಆಧರಿಸಿ ನಾನಾ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದ ಅನುದಾನವನ್ನು ಒಟ್ಟುಗೂಡಿಸಿ ಅದನ್ನು ಮೂಲ ಸೌಕರ್ಯ ಕಾರ್ಯಕ್ಕೆ ಬಳಸಲು ಒತ್ತು ನೀಡಲಾಗಿದೆ ಎಂದು ಹೇಳಿದರು. ಸಚಿವಾಲಯದ ಕಾರ್ಯದರ್ಶಿ ಡಾ.ಟಿ.ಸಿ.ಎ.ಅನಂತ್, ರಾಜ್ಯ ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಇತರರು ಹಾಜರಿದ್ದರು.
ತಮ್ಮ ಕ್ಷೇತ್ರದ ವ್ಯಾಪ್ತಿಕ್ಕೆ ಸಂಬಂಧಪಟ್ಟ ಸಾಂಖ್ಯಿಕ ವಿವರ ಜನಪ್ರತಿನಿಧಿಗಳಿಗೆ ಸಿಗಬೇಕು. ಏಕೆಂದರೆ ಬಹಳಷ್ಟು ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ವಸ್ತುಸ್ಥಿತಿ ತಿಳಿಸುವ ಅಂಕಿಸಂಖ್ಯೆ ಇರುವುದಿಲ್ಲ. ಅವರಿಗೆ ಸಾಂಖ್ಯಿಕ ವಿವರ ಲಭ್ಯವಿದ್ದರೆ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯವನ್ನು ನಿರ್ಧರಿಸಲು ಉಪಯುಕ್ತವಾಗಲಿದೆ. ಅಲ್ಲದೇ ಆ ಅಂಕಿಸಂಖ್ಯೆಗಳ ಆಧಾರದ ಮೇಲೆ ಕಲಾಪಗಳಲ್ಲೂ ಮನವರಿಕೆ ಮಾಡಲು ಅನುಕೂಲವಾಗಲಿದೆ.-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ