ಶ್ರೀನಗರ(ಜಮ್ಮು-ಕಾಶ್ಮೀರ): ಮುಂಬರುವ ಜಮ್ಮು-ಕಾಶ್ಮೀರ(Jammu Kashmir) ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್(Congress) ಮೈತ್ರಿಯಾಗಿ ಸ್ಪರ್ಧಿಸುವುದಾಗಿ ಗುರುವಾರ (ಆ.22) ತಿಳಿಸಿದೆ.
ಚುನಾವಣೆಯಲ್ಲಿನ ಮೈತ್ರಿ ಕುರಿತು ನ್ಯಾಷನಲ್ ಕಾನ್ಫರೆನ್ಸ್ (National Conference)ನ ನಾಯಕ ಫಾರೂಖ್ ಅಬ್ದುಲ್ಲಾ ಶ್ರೀನಗರದಲ್ಲಿ ಔಪಚಾರಿಕವಾಗಿ ಘೋಷಿಸಿರುವುದಾಗಿ ವರದಿ ವಿವರಿಸಿದೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಫಾರೂಖ್ ಅಬ್ದುಲ್ಲಾ ಮತ್ತು ಅವರ ಮಗ ಓಮರ್ ಅಬ್ದುಲ್ ಜತೆಗೂಡಿ ಮಾತುಕತೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ.
ಇದನ್ನೂ ಓದಿ:Kolkata doctor Case; ವೈದ್ಯೆಯ ಮೇಲೆ ಸಾಮೂಹಿಕ ಕೃತ್ಯವೆಸಗಿಲ್ಲ: ಸಿಬಿಐ ತನಿಖೆ ವರದಿ
ಶೀಘ್ರವೇ ಸೀಟು ಹಂಚಿಕೆ ಕುರಿತು ಘೋಷಣೆ ಮಾಡಲಿದ್ದು, ಜಮ್ಮು-ಕಾಶ್ಮೀರದ 90 ಸ್ಥಾನಗಳ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಫಾರೂಖ್ ಅಬ್ದುಲ್ಲಾ ತಿಳಿಸಿದ್ದಾರೆ. ಕಳೆದ 10ವರ್ಷಗಳಿಂದ ಜನರು ತೊಂದರೆ ಅನುಭವಿಸಿದ್ದು, ರಾಜ್ಯ ಸ್ಥಾನಮಾನವೇ ಮೈತ್ರಿ ಪಕ್ಷಗಳ ಪ್ರಮುಖ ಗುರಿಯಾಗಿದೆ ಎಂದು ಅಬ್ದುಲ್ಲಾ ಹೇಳಿದರು.