Advertisement

ಮಾಹೆ: ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಮ್ಮೇಳನ

11:50 PM Mar 26, 2023 | Team Udayavani |

ಮಣಿಪಾಲ: ಮಾಹೆ ವಿ.ವಿ. ಆಶ್ರಯದಲ್ಲಿ ಮಣಿಪಾಲ್‌ ಸೆಂಟರ್‌ ಫಾರ್‌ ಇನ್‌ಫೆಕ್ಷಿಯಸ್‌ ಡಿಸೀಸಸ್‌, ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌, ಕೆಎಂಸಿಯ ಮೆಡಿಸಿನ್‌, ಕಮ್ಯುನಿಟಿ ಮೆಡಿಸಿನ್‌ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಸಹಯೋಗದೊಂದಿಗೆ 4ನೇ ರಾಷ್ಟ್ರೀಯ ಮಟ್ಟದ ಸಾಂಕ್ರಾಮಿಕ ರೋಗಗಳ ಸಮ್ಮೇಳನ ನಡೆಯಿತು.

Advertisement

ಕ್ಲಿನಿಕಲ್‌ ಇನ್‌ಫೆಕ್ಷಿಯಸ್‌ ಡಿಸೀಸಸ್‌ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಡಾ| ರಾಮ ಸುಬ್ರಹ್ಮಣಿಯನ್‌ ಉದ್ಘಾಟಿಸಿ, ಕ್ಷಯ ರೋಗದ ಸೂಕ್ಷ್ಮ ಮತ್ತು ಔಷಧ- ನಿರೋಧಕ ರೂಪಗಳನ್ನು ಒಳಗೊಂಡಂತೆ ಚಿಕಿತ್ಸೆಯಲ್ಲಿ ಇತ್ತೀಚಿನ ಬದಲಾವಣೆಗಳ ಬಗ್ಗೆ ತಿಳಿಸಿದರು.

ಸಿಎಂಸಿ ವೆಲ್ಲೂರ್‌ನ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕಿ ಡಾ| ಪ್ರಿಸ್ಸಿಲ್ಲಾ ರೂಪಾಲಿ, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರರಾದ ಡಾ| ನೇಹಾ ಮಿಶ್ರಾ, ತಿರುವನಂತಪುರದ ಕಿಮ್ಸ್‌ ಹೆಲ್ತ್‌ನ ಸಾಂಕ್ರಾಮಿಕ ರೋಗಗಳ ಸಲಹೆಗಾರರಾದ ಡಾ| ರಾಜಲಕ್ಷ್ಮೀ ಮಾಹಿತಿ ನೀಡಿದರು. ಕೆಎಂಸಿ ಮಣಿಪಾಲದ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥೆ ಡಾ| ಕವಿತಾ ಸರವು ರೋಗಗಳ ಕುರಿತು ಚರ್ಚೆ ನಡೆಸಿ, ಭಾರತವು 2025ರ ವೇಳೆಗೆ ಕ್ಷಯ ರೋಗವನ್ನು ತೊಡೆದು ಹಾಕುವ ಗುರಿ ಹೊಂದಿದೆ ಎಂದರು.

ಸಂಶೋಧನ ನಿರ್ದೇಶನಾಲಯದ ಡಾ| ಸತೀಶ್‌ ರಾವ್‌ ಗೌರವ ಅತಿಥಿ ಗಳಾಗಿದ್ದರು. ಡಾ| ಪ್ರವೀಣ್‌ ತಿರ್ಲಂಗಿ, ಡಾ| ಶಿವದಾಸ್‌ ರಾಜಾ ರಾಮ್‌ ನಾಯ್ಕ್ ಅವರು ರಸಪ್ರಶ್ನೆ ನಡೆಸಿಕೊಟ್ಟರು.
ಸಮಾರೋಪದಲ್ಲಿ ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ನ ನಿರ್ದೇಶಕ ಡಾ| ಹೆಲ್ಮಟ್‌ ಬ್ರಾಂಡ್‌, ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಡಾ| ರಾಮ್‌ ಭಟ್‌ ಬಹುಮಾನ ವಿತರಿಸಿದರು. ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ ಡಾ| ಕವಿತಾ ಸರವು, ಸಮುದಾಯ ಆರೋಗ್ಯ ಕೇಂದ್ರಗಳ ವಿಭಾಗದ ಮುಖ್ಯಸ್ಥ ಡಾ| ಅಶ್ವಿ‌ನಿ ಕುಮಾರ್‌, ಔಷಧ ವಿಭಾಗದ ಮುಖ್ಯಸ್ಥ ಡಾ| ರವಿರಾಜ್‌ ಆಚಾರ್ಯ ಉಪಸ್ಥಿತರಿದ್ದರು.

ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಸಿಂಥಿಯಾ ಅಮೃತಾ, ಸಮುದಾಯ ವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕಿ ಡಾ| ಈಶ್ವರಿ ನಿರೂಪಿಸಿದರು. ಸಮು ದಾಯ ವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕಿ ಡಾ| ಸ್ನೇಹಾ ಮಲ್ಯ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next