Advertisement

ಫಿಲೋಮಿನಾದ ಪ್ರಶಾಂತ್‌ ನಾಯ್ಕ  ರಾಷ್ಟ್ರೀಯ ಚೆಸ್‌ ಚಾಂಪಿಯನ್‌

03:45 AM Jan 07, 2017 | Team Udayavani |

ದರ್ಬೆ: ಇಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಶಾಂತ್‌ ಜೆ. ನಾಯ್ಕ ಹೈದರಾಬಾದ್‌ನಲ್ಲಿ ಜರಗಿದ 1500 ರೇಟೆಡ್‌ ಒಳಗಿನ ರಾಷ್ಟ್ರೀಯ ಫಿಡೆ ಚೆಸ್‌ ಪಂದ್ಯಾಟದಲ್ಲಿ ಹೊಸ ರಾಷ್ಟ್ರೀಯ ಚಾಂಪಿಯನ್‌ ಆಗಿ ಮೂಡಿ ಬಂದಿದ್ದಾರೆ.

Advertisement

ದೇಶದ ಪ್ರಬಲ ಚೆಸ್‌ ಆಟಗಾರರು ಭಾಗವಹಿಸಿದ ಈ ಸ್ಪರ್ಧಾಕೂಟದಲ್ಲಿ ಪ್ರಶಾಂತ್‌ 9 ಸುತ್ತುಗಳಲ್ಲಿ ಸತತ ಪೈಪೋಟಿ ನೀಡಿ 8.5 ಅಂಕಗಳನ್ನು ಗಳಿಸಿ, ಚಾಂಪಿಯನ್‌ ಪಟ್ಟದೊಂದಿಗೆ ಟ್ರೋಫಿ ಮತ್ತು 80,000 ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಜ. 13 ರಿಂದ 16 ರ ತನಕ ದಿಲ್ಲಿಯಲ್ಲಿ 1600 ರೇಟೆಡ್‌ ಒಳಗಿನವರಿಗೆ ಅಖೀಲ ಭಾರತ ಚೆಸ್‌ ಫೆಡರೇಶನ್‌ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಚೆಸ್‌ ಸ್ಪರ್ಧೆಯಲ್ಲಿ ಪ್ರಶಾಂತ್‌ ಹಾಗೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅವನೀಶ್‌ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗಳಿಸಿದ ಪ್ರಶಾಂತ್‌ ಅವರ‌ನ್ನು ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್‌ ಡಿ’ಸೋಜಾ ಮತ್ತು ಸೌಮ್ಯಲತಾ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next