Advertisement

ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕನೇ ದಿನವೂ ವಾಯು ಗುಣಮಟ್ಟ ಕಳಪೆ

10:31 AM Oct 14, 2019 | Hari Prasad |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನವೂ ವಾಯು ಗುಣಮಟ್ಟ ಕಳಪೆಯಾಗಿದ್ದು,  ವಾಯು ಗುಣಮಟ್ಟದ ಸೂಚ್ಯಂಕ 266 ತಲುಪಿದೆ ಎಂದು ವಾಯು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ. ಮುಂಬರುವ ದಿನಗಳಲ್ಲಿ ವಾಯುವಿನ ಗುಣಮಟ್ಟ ಮತ್ತಷ್ಟು ಕುಸಿಯಲಿದ್ದು, 29 ವರ್ಷಗಳಲ್ಲಿಯೇ ದೆಹಲಿ ವಾಯು ಮಾಲಿನ್ಯದ ಮಟ್ಟ ಗಂಭೀರ ಸ್ಥಿತಿಗೆ ತಲುಪಿದೆ.

Advertisement

ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳ ಕೃಷಿ ಭೂಮಿಗಳಲ್ಲಿ ವ್ಯಾಪಕವಾಗಿ ಬಣವೆ, ಕೃಷಿ ಭೂಮಿಯ ಕಳೆಗೆ ಬೆಂಕಿ ಹಾಕುತ್ತಾರೆ. ಇದರಿಂದ ಉತ್ಪತ್ತಿಯಾಗುವ ಹೊಗೆಭರಿತ ಗಾಳಿ ದಿಲ್ಲಿಯನ್ನು ಆವರಿಸುತ್ತಿದೆ ಎನ್ನಲಾಗಿದೆ.

ವರದಿ ತಿಳಿಸಿರುವ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ 0-50 ಇದ್ದರೆ ವಾತಾವರಣ ಉತ್ತಮವಾಗಿರುತ್ತದೆ. 51-100 ಇದ್ದರೆ ತೃಪ್ತಿದಾಯಕ ಹಾಗೂ 101-200 ಇದ್ದರೆ ಮಧ್ಯಮ ಸ್ಥಿತಿಯಲ್ಲಿರಲ್ಲಿದ್ದು,  201-300 ಇದ್ದರೆ ಕಳಪೆ 301-400 ಇದ್ದರೆ ತೀರಾ ಕಳಪೆಯಾಗಿರುತ್ತದೆ.

ದಿಲ್ಲಿಯ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಪ್ರಮಾಣ ತೀರಾ ಕಳಪೆಯಾಗಿದ್ದು, ಧೀರ್‌ ಪುರ್‌ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 313, ಮಥುರಾ ರಸ್ತೆ 306, ದೆಹಲಿ ವಿಶ್ವವಿದ್ಯಾಲಯ ಬಳಿ 300ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next