Advertisement

ದೆಹಲಿಯಲ್ಲಿ ಇಂದು ಶತಮಾನದ ಶೀತಮಯ ಡಿಸೆಂಬರ್

09:59 AM Dec 31, 2019 | Team Udayavani |

ನವದೆಹಲಿ: ಉತ್ತರ ಭಾರತದಾದ್ಯಂತ ಚಳಿರಾಯ ಎಲ್ಲರನ್ನೂ ಎಲ್ಲವನ್ನೂ ಥರಗುಟ್ಟಿಸುತ್ತಿದ್ದಾನೆ. ಇತ್ತ ರಾಷ್ಟ್ರರಾಜಧಾನಿಯಲ್ಲೂ ಚಳಿರಾಯ ಇನ್ನಷ್ಟು ತೀವ್ರ ಸ್ವರೂಪ ತಾಳಿದ್ದಾನೆ! ಸೋಮವಾರ ಅತೀ ಶೀತಮಯ ದಿನವಾಗಿ ದಾಖಲಾಗಿದೆ. ಸೋಮವಾರದಂದು ಈ ಭಾಗದಲ್ಲಿ ದಾಖಲಾಗಿರುವ ತಾಪಮಾನ ಕಳೆದ 119 ವರ್ಷಗಳಲ್ಲೇ ಅತೀ ಕನಿಷ್ಟವಾಗಿದೆ.

Advertisement

ಸಾಮಾನ್ಯ ತಾಪಮಾನಕ್ಕಿಂತ ಅರ್ಧದಷ್ಟು ಕಡಿಮೆ ತಾಪಮಾನ ಇಂದು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ದಾಖಲಾಗಿದೆ ಎಂದು ಪ್ರಾದೇಶಿಕ ತಾಪಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮತ್ತು ಇಂದು ದಾಖಲಾಗಿರುವ ತಾಪಮಾನ ಡಿಸೆಂಬರ್ ತಿಂಗಳಲ್ಲೇ ಕನಿಷ್ಟ ತಾಪಮಾನದ ದಿನವಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next