Advertisement

ಕೊರೆಯುವ ಚಳಿಗೆ ದೆಹಲಿ ಗಡ ಗಡ ; 1901ರ ಬಳಿಕದ ಕೋಲ್ಡ್ ಡಿಸೆಂಬರ್

09:55 AM Dec 27, 2019 | Hari Prasad |

ನವದೆಹಲಿ: ಕೆಲವೇ ದಿನಗಳ ಹಿಂದೆಯಷ್ಟೇ ವಾಯುಮಾಲಿನ್ಯ ಹಾಗೂ ಉರಿ ಬಿಸಿಲಿಗೆ ಕಂಗಾಲಾಗಿದ್ದ ದೆಹಲಿ ನಿವಾಸಿಗಳನ್ನು ಇದೀಗ ಮೈ ಥರಗುಟ್ಟಿಸುವ ಚಳಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಮತ್ತಿ ಈ ಡಿಸೆಂಬರ್ ತಿಂಗಳಿನ ಚಳಿಗಾಲ ಸುಮಾರು ನೂರು ವರ್ಷಗಳ ಬಳಿಕ ದೆಹಲಿ ಕಾಣುತ್ತಿರುವ ಅತೀ ಶೀತಮಯ ಚಳಿಯ ತಿಂಗಳಾಗಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.

Advertisement

ಗುರುವಾರದಂದು ರಾಷ್ಟ್ರರಾಜಧಾನಿಯಲ್ಲಿ ದಾಖಲಾದ 19.85 ಡಿಗ್ರಿ ಸೆಲ್ಷಿಯಸ್ ಡಿಸೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಟ ತಾಪಮಾನವಾಗಿದೆ. ಇನ್ನು ಡಿಸೆಂಬರ್ 31ರವರೆಗೆ ಇದು 19.15 ಡಿಗ್ರಿ ಸೆಲ್ಷಿಯಸ್ ಗೆ ಕುಸಿಯುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಇದೇ ಸಂದರ್ಭದಲ್ಲಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next