Advertisement

ಕ್ಯಾನ್ಸರ್‌ ಭಯ ಬೇಡ, ಎಚ್ಚರವಿರಲಿ!

12:29 AM Nov 07, 2021 | Team Udayavani |

ಭಾರತದಲ್ಲಿ ನವೆಂಬರ್‌ 7 ರಂದು ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸಾಮಾನ್ಯ ಜನರಿಗೆ ಕ್ಯಾನ್ಸರ್‌ ತಡೆಗಟ್ಟುವಿಕೆ ಮತ್ತು ಕಾಯಿಲೆಯ ಆರಂಭಿಕ ಪತ್ತೆಯ ಬಗ್ಗೆ ಹೆಚ್ಚಿನ ಜಾಗೃತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ದೇಶದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಕ್ಯಾನ್ಸರ್‌ ನಿಯಂತ್ರಣ ಕಾರ್ಯಕ್ರಮವನ್ನು 1975 ರಲ್ಲಿ ಪ್ರಾರಂಭಿಸಲಾಯಿತು. ಇತ್ತೀಚೆಗಿನ ಮಾಹಿತಿಗಳ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.1 ಮಿಲಿಯನ್‌ ಹೊಸ ಪ್ರಕರಣಗಳು ವರದಿ ಯಾಗುತ್ತಿವೆ. ಭಾರತದಲ್ಲಿ ಪ್ರತೀ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೋಶದ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಾರೆ ಎಂದು ಅಂದಾಜಿಸಲಾಗಿದೆ. ತಂಬಾಕು (ಬೀಡಿ, ಸಿಗರೆಟ್‌, ಗುಟ್ಕಾ ಇತ್ಯಾದಿ) ಬಳಕೆಯು 2019 ರಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ 3,17,928 ಸಾವುಗಳಿಗೆ ಕಾರಣವಾಗಿದೆ. ಬಾಯಿಯ ಮತ್ತು ಶ್ವಾಸ ಕೋಶದ ಕ್ಯಾನರ್‌ಗಳು ಪುರುಷರಲ್ಲಿ ಶೇ.25ಕ್ಕಿಂತ ಹೆಚ್ಚು ಕಾನ್ಸರ್‌ ಸಾವುಗಳಿಗೆ ಕಾರಣವಾದರೆ ಸ್ತನ ಮತ್ತು ಬಾಯಿಯ ಕ್ಯಾನ್ಸರ್‌ ಶೇ.25 ಮಹಿಳೆಯರಲ್ಲಿ ಸಾವಿಗೆ ಕಾರಣವಾಗಿದೆ. ಮೂರನೇ ಎರಡರಷ್ಟು ಕ್ಯಾನ್ಸರ್‌ ಪ್ರಕರಣಗಳು ಅಂತಿಮ ಹಂತದಲ್ಲಿ ಪತ್ತೆ ಮಾಡಲ್ಪಡುತ್ತವೆ ಮತ್ತು ರೋಗಿಗಳ ಬದುಕುಳಿಯುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

Advertisement

ನಮ್ಮ ಬದುಕುವ ರೀತಿ ಹಾಗೂ ಜೀವನ ಶೈಲಿ ನಮ್ಮ ಸ್ವಾಸ್ಥ್ಯದ ಮೇಲೆ ಆಳವಾದ ಪರಿಣಾಮಗಳನ್ನು ಬೀರಬಹುದು. ಇದು ಜನಸಾಮಾನ್ಯ ರಿಗೆ ಹಾಗೂ ಕ್ಯಾನ್ಸರ್‌ ಇರುವವರಿಗೂ ಅನ್ವಯಿಸುತ್ತದೆ. ಆರೋಗ್ಯಕರ ಜೀವನಶೈಲಿಯು ಕ್ಯಾನ್ಸರ್‌ ಚಿಕಿತ್ಸೆಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ ಮತ್ತು ಶೀಘ್ರವಾಗಿ ಸಹಜ ಜೀವನಕ್ಕೆ ಮರಳಲು ಸಹಾಯ ಮಾಡುತ್ತದೆ. ಇದು ವ್ಯಕ್ತಿಯ ದೀರ್ಘಾವಧಿಯ ಆರೋಗ್ಯವನ್ನು ಸುಧಾರಿಸಬಹುದು.

ಕ್ಯಾನ್ಸರಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಆರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜೀವನಶೈಲಿಯನ್ನು ಮುನ್ನೆಚ್ಚರಿಕೆಯಿಂದ ರೂಪಿಸಿಕೊಳ್ಳುವುದೇ ಆಗಿದೆ. ವೈಜ್ಞಾನಿಕ ಸಂಶೋಧನೆಗಳು ಕೂಡ ಈ ಅಂಶಗಳು ಆರೋಗ್ಯ ವನ್ನು ಉತ್ತಮಪಡಿಸಿಕೊಳ್ಳಲು ಸಹ ಕಾರಿ ಎಂದು ದೃಢಪಡಿಸಿವೆ.

ಇದನ್ನೂ ಓದಿ:2026ರಲ್ಲಿ ಚಂದ್ರನಲ್ಲಿ ರೋವರ್‌; ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ, ನಾಸಾದಿಂದ ಹೊಸ ಯೋಜನೆ

ಧೂಮಪಾನ ಹಾಗೂ
ತಂಬಾಕು ಸೇವನೆ ತ್ಯಜಿಸಿ
ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್‌ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೆಂದರೆ ಪ್ರತ್ಯಕ್ಷ ಅಥವಾ ಪರೋಕ್ಷ ಧೂಮಪಾನ. ತಂಬಾಕು ಹೊಗೆಯು 7,000 ರಾಸಾಯನಿಕಗಳನ್ನು ಹೊಂದಿರುತ್ತದೆ ಮತ್ತು ಅವುಗಳಲ್ಲಿ ಕನಿಷ್ಠ 70ರಷ್ಟು ಕ್ಯಾನ್ಸರ್‌ ಕಾರಕಗಳಾಗಿವೆ. ಇದು ದೇಹದ ಪ್ರತಿಯೊಂದು ಭಾಗದಲ್ಲೂ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಸೇವನೆಯು ಕ್ಯಾನ್ಸರ್‌ ಸಾವಿನ ಅತೀ ದೊಡ್ಡ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ವರ್ಷಕ್ಕೆ ಸುಮಾರು 6 ಮಿಲಿಯನ್‌ ಜನರನ್ನು ಕೊಲ್ಲುತ್ತಿದೆ.

Advertisement

ಸಲಹೆ:ನೀವು ಧೂಮಪಾನ ಮಾಡುತ್ತಿದ್ದರೆ, ನಿಲ್ಲಿಸಿ. (ದೀರ್ಘ‌ಕಾಲದಿಂದ ಧೂಮಪಾನಿಗಳ ಆಗಿದ್ದವರಿಗೆ ಎಂದಿಗೂ ತಡವಾಗಿಲ್ಲ: ಹಿರಿಯ ನಾಗರಿಕರಾಗಿ ಧೂಮಪಾನ ತ್ಯಜಿಸಿದವರು ಆರೋಗ್ಯವನ್ನು ಉತ್ತಮಪಡಿಸಿಕೊಂಡಿರುವು ದನ್ನು ಅಧ್ಯಯನಗಳು ತೋರಿಸುತ್ತವೆ.) ನೀವು ತಂಬಾಕು ಬಳಸದಿದ್ದರೆ ಪ್ರಾರಂಭಿಸಲೇಬೇಡಿ.

ಒತ್ತಡ ನಿರ್ವಹಣೆ
ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿರಂತರ ಮಾನಸಿಕ ಮತ್ತು ದೈಹಿಕ ಒತ್ತಡವು ನರ ರಾಸಾಯನಿಕ, ಹಾರ್ಮೋನ್‌ ಮತ್ತು ರೋಗನಿರೋಧಕ ವ್ಯವಸ್ಥೆಯ ಕಾರ್ಯ ನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ. ಕ್ರಮೇಣ ದೇಹದ ಈ ಆಂತರಿಕ ಬದಲಾವಣೆಗಳು ಕ್ಯಾನ್ಸರ್‌ ಉತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

ಒತ್ತಡವನ್ನು ನಿರ್ವಹಿಸಲು
ಕೆಲವು ಸಲಹೆಗಳು ಇಲ್ಲಿವೆ:
ಪ್ರಾಣಾಯಾಮ, ಧ್ಯಾನ ಮತ್ತು ಯೋಗದ ವಿಶ್ರಾಂತಿ ಕ್ರಿಯೆಗಳನ್ನು ಅನುಸರಿಸುವುದು ಅಥವಾ ದೈನಂದಿನ ಜಂಜಡಗಳಿಂದ ಸ್ವಲ್ಪ ಬಿಡುವು ಮಾಡಿಕೊಂಡು ಯಾವುದೇ ಹವ್ಯಾಸ ಅಥವಾ ಕೌಶಲ ಇರುವ ಕೆಲಸಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಒತ್ತಡ ನಿರ್ವಹಣೆ ಅಭ್ಯಾ ಸಗಳಿಗಾಗಿ ದಿನಕ್ಕೆ ಕನಿಷ್ಠ 20 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ನಿಗದಿಪಡಿಸುವುದು ಉತ್ತಮ.

ನಿಯಂತ್ರಿತ ಸಕ್ಕರೆಯ ಉಪಯೋಗ
ದಿನಕ್ಕೆ ಸರಿಸುಮಾರು 10 ಚಮಚಗಳಷ್ಟು ಸಕ್ಕರೆಯ ತಲಾವಾರು ಸೇವನೆಯೊಂದಿಗೆ ಸರಾಸರಿ ಭಾರತೀಯರು ವರ್ಷಕ್ಕೆ ಸುಮಾರು 18 ಕೆ.ಜಿ.ಗಳಷ್ಟು ಸಕ್ಕರೆಯನ್ನು ಸೇವಿಸುತ್ತಾರೆ ಎಂದು ಸರಕಾರಿ ಅಂಕಿ ಅಂಶಗಳು ಹೇಳುತ್ತವೆ. ದೈನಂದಿನ ಆಹಾರದ ಜತೆಗೆ ಹೆಚ್ಚು ಸೇರಿಸಿದ ಸಕ್ಕರೆಯನ್ನು ಸಿಹಿತಿಂಡಿ ಅಥವಾ ಪಾನೀಯದ ರೂಪದಲ್ಲಿ ಸೇವಿಸುವುದು ಬೊಜ್ಜು ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಇವು ಶರೀರದಲ್ಲಿ ಕ್ಯಾನ್ಸರ್‌ ಉತ್ಪತ್ತಿಗೆ ಪೂರಕವಾಗಿ ಕೆಲಸ ಮಾಡುತ್ತವೆ.

ಸಲಹೆ: ದೈನಂದಿನ ಆಹಾರದಲ್ಲಿ ಬಿಳಿ ಸಕ್ಕರೆಯಂಶವನ್ನು ಅತೀ ಕಡಿಮೆ ಮಾಡಿ ಅಥವಾ ನಿಲ್ಲಿಸಿ. ಬಿಳಿಸಕ್ಕರೆಗೆ ಬದಲಾಗಿ ಸಾವಯವ ಬೆಲ್ಲ, ಜೇನು, ಸ್ಟೀವಿಯಾ ಇತ್ಯಾದಿಗಳನ್ನು ಬಳಸುವುದು ಉತ್ತಮ. ಹೆಚ್ಚಿನ ಆಹಾರದ ಉತ್ಪನ್ನ ಗಳಲ್ಲಿ ಗುಪ್ತವಾಗಿರುವ ಸಕ್ಕರೆಯ ಅಂಶಗಳನ್ನು ಕೂಡ ಅದರ ಹೊರಭಾಗದಲ್ಲಿ ಕಡ್ಡಾಯ ವಾಗಿ ನಮೂದಿಸಲಾಗುವ ಪೋಷಕಾಂಶಗಳ ಪಟ್ಟಿಯಲ್ಲಿ ಪತ್ತೆಹಚ್ಚಿ ಅಂತಹ ಉತ್ಪನ್ನಗಳನ್ನು ದೂರವಿರಿಸುವುದೇ ಲೇಸು.

ನಿಯಮಿತ ವ್ಯಾಯಾಮ
ಕ್ಯಾನ್ಸರ್‌ ಚಿಕಿತ್ಸೆಯ ಸಮಯದಲ್ಲಿ ಮತ್ತು ಅನಂತರ ವ್ಯಾಯಾಮ ಅಗತ್ಯ. ಇದು ಶಾರೀರಿಕ ಆಯಾಸ, ತೂಕ ಹೆಚ್ಚಾಗುವುದು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಡ ಜೀವನಶೈಲಿಯು ಕ್ಯಾನ್ಸರ್‌ಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ದಿನನಿತ್ಯದ ಜೀವನಕ್ರಮದಲ್ಲಿ ನಿರಂತರ ಚಲನಶೀಲತೆಯಿಂದ ನಮ್ಮ ದೇಹದಲ್ಲಿ ಉತ್ಪತ್ತಿ ಯಾಗುವ ಹಾನಿಕಾರಕ ವಿಷಗಳನ್ನು ಹೊರಗೆ ಹಾಕಬಹುದಾಗಿದೆ. ನಿಯಮಿತ ವ್ಯಾಯಾಮದ ಜತೆಗೆ ದೀರ್ಘ‌ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ಮಲಗುವುದನ್ನು ಮಾಡದಿರುವುದು ಒಳ್ಳೆಯದು.
ಸಲಹೆ: ದಿನಕ್ಕೆ 30 ರಿಂದ 40 ನಿಮಿಷಗಳ ಕಾಲ ನಡಿಗೆ ಅಥವಾ ಬೆವರು ಹರಿಸುವಂತೆ ಮಾಡುವ ಶಾರೀರಿಕ ವ್ಯಾಯಾಮವು ಉತ್ತಮ.

ಪ್ಲಾಸ್ಟಿಕ್‌ ವಾಸ್ತವವಾಗಿ ಕ್ಯಾನ್ಸರ್‌
ಕೆಲವು ಪ್ಲಾಸ್ಟಿಕ್‌ ಕಂಟೈನರ್‌ಗಳು, ಲವಣಯುಕ್ತ ನೀರಿನ ಬಾಟಲಿಗಳು ಆಕಅ (ಬೆಸೆ#àನೋಲ್‌ ಎ) ಎಂಬ ಸಂಶ್ಲೇಷಿತ ಸಾವಯವ ಸಂಯುಕ್ತವನ್ನು ಒಳಗೊಂಡಿರುತ್ತವೆ, ಇದು ದೇಹದ ಅಂತಃಸ್ರಾವಕ ವ್ಯವಸ್ಥೆ(ಛಿnಛಟcrಜಿnಛಿ)ಗೆ ಅಡ್ಡಿಪಡಿಸುತ್ತದೆ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ.

ಸಲಹೆ: ಪ್ಲಾಸ್ಟಿಕ್‌ ವಾಸ್ತವವಾಗಿ ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂಬುದು ನಿರ್ಣಾಯಕವಲ್ಲ. ಆದರೆ ಆಕಅ ಮುಕ್ತವಾಗಿರುವ ಪ್ಲಾಸ್ಟಿಕ್‌ಗಳನ್ನು ಆಯ್ಕೆ ಮಾಡುವುದು ಮತ್ತು ಸಾಧ್ಯವಾದಾಗಲೆಲ್ಲ ಗಾಜಿನಂತಹ ಪರ್ಯಾಯ ಪಾತ್ರೆಗಳನ್ನು ಬಳಸುವುದು ಒಳ್ಳೆಯದು. ಪ್ಯಾರಬೇನ್‌ಯುಕ್ತ ದಿನಬಳಕೆ ಸಾಮಗ್ರಿಗಳು ಜರ್ನಲ್‌ ಆಫ್ ಅಪ್ಲೆ„ಡ್‌ ಟಾಕ್ಸಿಕಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಟೂತ್‌ಪೇಸ್ಟ್‌ಗಳು, ಶಾಂಪೂಗಳು, ಡಿಯೋಡರೆಂಟ್‌ಗಳು ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಪ್ಯಾರಾಬೆನ್‌ಗಳೆಂಬ ರಾಸಾಯನಿಕ ಸಂರಕ್ಷಕಗಳು ಚರ್ಮದ ಮೂಲಕ ಸುಲಭವಾಗಿ ಶರೀರದೊಳಗೆ ಹೀರಲ್ಪಡುತ್ತವೆ ಮತ್ತು ಕ್ರಮೇಣವಾಗಿ ಸ್ತನ ಕ್ಯಾನ್ಸರ್‌ ಕೋಶಗಳ ಅನಿಯಂತ್ರಿತ ಬೆಳವಣಿಗೆಯನ್ನು ಹೆಚ್ಚಿಸಬಹುದಾದ ಅಪಾಯವಿದೆ.

ಸಲಹೆ: ಪ್ಯಾರಾಬೆನ್‌ಮುಕ್ತ ದಿನಬಳಕೆ ಸಾಮಗ್ರಿಗಳನ್ನು ಬಳಸುವುದು ಉತ್ತಮ.

ಸಾಮಾನ್ಯ ಪ್ಯಾರಾಬೆನ್‌ಗಳಲ್ಲಿ ಮಿಥೈಲ್‌ಪ್ಯಾರ ಬೆನ್‌, ಪ್ರೊಪಿಲ್‌ ಪ್ಯಾರಬೆನ್‌, ಇಥೈಲ್‌ ಪ್ಯಾರಬೆನ್‌ ಮತ್ತು ಬ್ಯುಟೈಲ್‌ ಪ್ಯಾರಬೆನ್‌ ಸೇರಿವೆ.

– ಡಾ| ಶ್ಯಾಮರಾಜ್‌ ನಿಡುಗಳ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next