Advertisement

Karnataka ನಾಲ್ವರು ಶಿಕ್ಷಕರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ

12:34 AM Aug 28, 2024 | Team Udayavani |

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು ಕೊಡಮಾಡುವ ರಾಷ್ಟ್ರೀಯ ಉತ್ತಮ ಶಿಕ್ಷಕ -2024 ಪ್ರಶಸ್ತಿಗೆ ರಾಜ್ಯದ ನಾಲ್ವರು ಶಿಕ್ಷಕರು ಭಾಜನರಾಗಿದ್ದಾರೆ.

Advertisement

ಹುಣಸೂರಿನ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್‌.ಎನ್‌. ಗಿರೀಶ್‌ ಮತ್ತು ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ಸರಕಾರಿ ಪ್ರೌಢ ಶಾಲೆಯ ಶಿಕ್ಷ ನಾರಾಯಣಸ್ವಾಮಿ ಆರ್‌., ಬೆಂಗಳೂರಿನ ಸಂಜಯನಗರದ ಡ್ಯಾಫೊಡಿಲ್ಸ್‌ ಕೇಂದ್ರೀಯ ಪಠ್ಯಕ್ರಮ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ನರಸಿಂಹಮೂರ್ತಿ ಎಚ್‌.ಕೆ., ಮಲ್ಲಸಂದ್ರದ ಕಮ್ಮಗೊಂಡನಹಳ್ಳಿಯ ಪಿಎಂ ಶ್ರೀ ಕೇಂದ್ರಿಯ ವಿದ್ಯಾಲಯದ ಶಿಕ್ಷಕ ಅಶೋಕ್‌ ಸೇನ್‌ಗುಪ್ತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ. 5ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಯಾರಿಗೆಲ್ಲ ಪ್ರಶಸ್ತಿ?
-ಎಚ್‌.ಎನ್‌. ಗಿರೀಶ್‌, ಹುಣಸೂರಿನ ಬಾಲಕಿಯರ ಸರಕಾರಿ ಪಿಯು ಕಾಲೇಜು
-ನಾರಾಯಣಸ್ವಾಮಿ ಆರ್‌., ದೊಡ್ಡಬಳ್ಳಾ ಪುರದ ಬಾಶೆಟ್ಟಿಹಳ್ಳಿಯ ಸರಕಾರಿ ಪ್ರೌಢ ಶಾಲೆ
-ನರಸಿಂಹಮೂರ್ತಿ ಎಚ್‌. ಕೆ., ಬೆಂಗಳೂರಿನ ಸಂಜಯನಗರದ ಡ್ಯಾಫೊಡಿಲ್ಸ್‌ ಆಂಗ್ಲ ಮಾಧ್ಯಮ ಶಾಲೆ
-ಅಶೋಕ್‌ ಸೇನ್‌ಗುಪ್ತ, ಮಲ್ಲಸಂದ್ರದ ಕಮ್ಮಗೊಂಡನಹಳ್ಳಿಯ ಪಿಎಂ ಶ್ರೀ ಕೇಂದ್ರಿಯ ವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next