Advertisement

‘ಸ್ಥಳೀಯವಲ್ಲದ ಪದಾರ್ಥ ಸೇವನೆಯಿಂದ ಬಾಧಕ’

11:15 AM Nov 09, 2018 | |

ಮೂಡಬಿದಿರೆ: ಸ್ಥಳೀಯವಾಗಿ ಬೆಳೆಯದೆ ಇತರ ಪ್ರದೇಶಗಳಿಂದ ತರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ದೈಹಿಕ ಆರೋಗ್ಯಕ್ಕೆ ಪೂರಕವಾಗುವ ಬದಲು ಬಾಧಕವಾಗುವ ಸಾಧ್ಯತೆಯೇ ಹೆಚ್ಚು. ಆದಷ್ಟು ಮಟ್ಟಿಗೆ ನಮ್ಮ ಪರಿಸರದಲ್ಲಿ ಬೆಳೆಯುವ ಹಣ್ಣು, ತರಕಾರಿ, ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯ ಪೂರ್ಣವಾಗಿ ಬದುಕಲು ಸಾಧ್ಯ ಎಂದು ಉಡುಪಿಯ ಡಾ| ಶ್ರೀಧರ ಬಾಯರಿ ಹೇಳಿದರು.

Advertisement

ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ವಿದ್ಯಾ ಗಿರಿಯ ಪಿ.ಜಿ. ಸೆಮಿನಾರ್‌ ಹಾಲ್‌ ನಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಆಯುರ್ವೇದ ವೈದ್ಯಕೀಯ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ‘ಹಿತ್ತಲ ಗಿಡ ಮದ್ದು’ ವಿಷಯದಲ್ಲಿ ಮಾಹಿತಿ ನೀಡಿದರು.

ಔಷಧಿಯುಕ್ತ ಸಸ್ಯಗಳ ಮಹತ್ವ
ಆಯುರ್ವೇದ ವಿದ್ಯಾರ್ಥಿಗಳಲ್ಲದೆ ಮೂಡಬಿದಿರೆ ಪರಿಸರದ ಆಸಕ್ತ ರೈತರೂ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸ್ಲೈಡ್ ಮೂಲಕ ಔಷಧಿಯುಕ್ತ ಸಸ್ಯಗಳ ಮಹತ್ವ ಹಾಗೂ ರೈತರು ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಗಮನಿಸಿ ಗಿಡಮೂಲಿಕೆಗಳನ್ನು ಬೆಳೆಸುವ ಜಾಣತನ ತೋರಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಬಿದಿರೆ ತಾ| ಘಟಕದ ಅಧ್ಯಕ್ಷ ವಾಲ್ಟರ್‌ ನಝರೆತ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಅಮೀನ್‌, ದ.ಕ. ಜಿಲ್ಲಾ ಸಂಘಟನ ಕಾರ್ಯದರ್ಶಿ ರೋನಿ ಮೆಂಡೋನ್ಸ ಮುಖ್ಯಅತಿಥಿಗಳಾಗಿದ್ದರು.

ಈ ಸಂದರ್ಭ ರಸಶಾಸ್ತ್ರ ವಿಭಾಗದ ಡಾ| ಕೃಷ್ಣಮೂರ್ತಿ ಸ್ವಾಗತಿಸಿದರು. ಆಳ್ವಾಸ್‌ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕಿ ಡಾ| ಝೆನಿಕಾ ಡಿ’ಸೋಜಾ, ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ| ಪ್ರವೀಣ್‌ ಬಿ.ಎಸ್‌., ಆಡಳಿತಾಧಿಕಾರಿ ಜೋಬಿನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಗೌರವಾರ್ಪಣೆ
ಪ್ರಾಚಾರ್ಯ ಡಾ| ಬಿ. ವಿನಯಚಂದ್ರ ಶೆಟ್ಟಿ ಅವರು ಡಾ| ಶ್ರೀಧರ ಬಾಯರಿ ಅವರನ್ನು ಗೌರವಿಸಿದರು. ಡಾ| ರವಿ ರಾವ್‌ ವಂದಿಸಿದರು. ಡಾ| ಗೀತಾ ಮತ್ತು ಡಾ| ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.

ಉಚಿತ ಆರೋಗ್ಯ ಶಿಬಿರ 
ಉಚಿತ ಆರೋಗ್ಯಶಿಬಿರದಲ್ಲಿ ವಿವಿಧ ಖಾಯಿಲೆಗಳ ಪರೀಕ್ಷೆ ನಡೆಸಿ, ಸಲಹೆ ನೀಡಲಾಯಿತು. ರಕ್ತದಲ್ಲಿ ಸಕ್ಕರೆ ಅಂಶ ಪರಿಶೀಲನೆ, ರಕ್ತದೊತ್ತಡ ಪರೀಕ್ಷೆ ಪರೀಕ್ಷೆ ಉಚಿತವಾಗಿ ಮಾಡಲಾಯಿತು. ಆಸಕ್ತರಿಗೆ ಗಿಡಮೂಲಿಕೆಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next