Advertisement

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಆಶಾ ಪರೇಖ್‌

11:13 PM Sep 30, 2022 | Team Udayavani |

ಹೊಸದಿಲ್ಲಿ: ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ “ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಹಿರಿಯ ನಟಿ ಆಶಾ ಪರೇಖ್‌ ಅವರಿಗೆ ಪ್ರದಾನಿ ಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಯಿತು.

Advertisement

ತಮಿಳಿನ “ಸೂರಾರೈ ಪೊಟ್ರಾ’ ಸಿನೆಮಾದಲ್ಲಿ ನಟನೆಗಾಗಿ ಸೂರ್ಯರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪ್ರದಾನಿ ಸಲಾಯಿತು. ಹಾಗೆಯೇ ಅವರೊಂದಿಗೆ ಹಿಂದಿಯ “ತನ್ಹಾಜಿ’ ಸಿನೆಮಾದ ನಟನೆ ಗಾಗಿ ಅಜಯ್‌ ದೇವಗನ್‌ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಕೊಡಲಾಯಿತು.

ಡೊಳ್ಳು ಅತ್ಯುತ್ತಮ ಕನ್ನಡ ಚಿತ್ರ: ಇದೇ ವೇಳೆ ಕನ್ನಡದ “ಡೊಳ್ಳು’ ಸಿನೆಮಾಕ್ಕೆ ಅತ್ಯುತ್ತಮ ಕನ್ನಡ ಚಿತ್ರ, ಹಾಗೆಯೇ ತುಳು ಭಾಷೆಯ “ಜೀಟಿಗೆ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನೆಮಾ ಪ್ರಶಸ್ತಿ ನೀಡಲಾ ಯಿತು. ನಟ ಸಂಚಾರಿ ವಿಜಯ್‌ ಅಭಿನಯದ “ತಲೆದಂಡ’ ಸಿನೆಮಾಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಸಿನೆಮಾ ಹಾಗೂ ಗಿರೀಶ್‌ ಕಾಸರವಳ್ಳಿ ನಿರ್ದೇಶ ನದ “ನಾದದ ನವನೀತ’ ಸಿನೆಮಾಕ್ಕೆ ಅತ್ಯುತ್ತಮ ಕಲಾತ್ಮಕ ಸಿನೆಮಾ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next