Advertisement
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ನವ ದೆಹಲಿಯಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೊರೊನಾ ಹಿನ್ನೆಲೆಯಲ್ಲಿ ವರ್ಚುವಲ್ ವೇದಿಕೆ ಮುಖಾಂತರ ನಡೆಸಲಾಯಿತು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ಧಿಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯದ ಮುಖ್ಯಮಂತ್ರಿ ಬಿ. ಎಸ್‌ಯಡಿಯೂರಪ್ಪ ಹಾಗೂವಿವಿಧ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣಸಶಕ್ತೀಕರಣ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
Related Articles
Advertisement
ದೆಹಲಿಯಲ್ಲಿ ಸಾಂಕೇತಿಕವಾಗಿ ಪ್ರಶಸ್ತಿ ವಿತರಣೆ ಮಾಡಲಾಗಿದ್ದು, ಪ್ರಶಸ್ತಿ ಮೊತ್ತವನ್ನು ಆಯಾಯಜಿಪಂಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆಮಾಡಲಾಗಿದೆ ಎಂದರು. ದೆಹಲಿಯಲ್ಲಿ ಕಾರ್ಯಕ್ರಮ ನಡೆದರೆ ಇತ್ತ ಹಾಸನ ಜಿಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಪಂ ಸಿಇಒ ಬಿ.ಎ. ಪರಮೇಶ್ ಅವರಿಗೆ ಪ್ರಶಸ್ತಿ ಫಲಕವನ್ನು ಹಸ್ತಾಂತರ ಮಾಡಿ ಅಭಿನಂದಿಸಿದರು.
ಇದೊಂದು ಹೆಮ್ಮೆಯ ಸಾಧನೆ.ಜಿಲ್ಲೆಗೆ ಸಂದಗೌರವ ಇದಕ್ಕೆ ಕಾರಣರಾದ ಜನಪ್ರತಿನಿಧಿಗಳುಹಾಗೂ ಜಿಪಂ ಸಿಇಒ ಇತರ ಜಿಲ್ಲಾ ಹಾಗೂತಾಲೂಕು ಮತ್ತು ಗ್ರಾಪಂ ಮಟ್ಟದ ಅಧಿಕಾರಿಗಳನ್ನುತಾವು ಅಭಿನಂದಿಸುವುದಾಗಿ ಆರ್.ಗಿರೀಶ್ ಹೇಳಿದರು.
ಜಿಪಂ ಸಿಇಒ ಪರಮೇಶ್ ಅವರು ಸಹ ಪ್ರಶಸ್ತಿಬಂದ ಬಗ್ಗೆ ಸಂತಸ ವ್ಯಕ್ತಪಡಿಸಿ, ಈ ಸಾಧನೆಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸುವುದಾಗಿತಿಳಿಸಿದರು.
ಉಪ ಕಾರ್ಯದರ್ಶಿಗಳಾದ ಚಂದ್ರ ಶೇಖರ್, ಮಹೇಶ್, ಮುಖ್ಯ ಯೋಜನಾಧಿಕಾರಿ ನಾಗರಾಜ್, ಯೋಜನಾ ನಿರ್ದೇಶಕರಾದ ವಿಠಲಕಾವಳೆ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಇತರರಿದ್ದರು.