ಹಾಸನ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯು ಪಂಚಾಯತಿಗಳ ಸಬಲೀಕರಣಕ್ಕೆ ನೀಡುವ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಪಂ ಆಯ್ಕೆಯಾಗಿದೆ.
ಗ್ರಾಪಂ ಹಾಗೂ ತಾಪಂಗಳನ್ನು ಎಲ್ಲಾ ಸ್ವರೂಪಗಳಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಹಾಸನ ಜಿಪಂ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಗ್ರಾಮೀಣಾ ಭಿವೃದ್ಧಿಇಲಾಖೆ ನೀಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತಿ ಸಶಕ್ತೀರಣ ಪುರಸ್ಕಾರಕ್ಕೆ ಪಾತ್ರವಾಗಿದೆ. ಗ್ರಾಮ ಹಾಗೂ ತಾಪಂಗಳಿಗೆ ಸರ್ಕಾರದಿಂದಬಿಡುಗಡೆಯಾದ ಅನುದಾನ ಹಾಗೂಅನುಷ್ಠಾನಗೊಂಡ ಯೋಜನೆ ಗಳನ್ನು ಜನರಿಗೆತಲುಪಿಸುವಲ್ಲಿ ಹಾಸನ ಜಿಲ್ಲೆ ಯಶಸ್ವಿಯಾಗಿದೆ. ಜತೆಗೆಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರು, ನೈರ್ಮಲ್ಯ,ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನುಒದಗಿಸುವಲ್ಲಿ ಹೆಚ್ಚಿನ ಒತ್ತನ್ನು ನೀಡಿರುವುದೂ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಂಡಕ್ಕೆ ಮೀಸಲಿರಿಸಿದ ಸರ್ಕಾರದ ಎಲ್ಲಾ ಸೌಲಭ್ಯ ಹಾಗೂ ಅನುದಾನವನ್ನುಸಂಪೂರ್ಣವಾಗಿ ವಿನಿಯೋಗಿಸಿ ಆ ವರ್ಗಗಳ ಕಲ್ಯಾಣಕ್ಕೆಹೆಚ್ಚಿನ ಒತ್ತನ್ನು ನೀಡಿ ಅಭಿವೃದ್ಧಿಗೊಳಿಸಿರುವುದುಹಾಗೂ ಗ್ರಾಪಂಗಳಲ್ಲಿ ಹೆಚ್ಚಿನ ಗ್ರಾಮಸಭೆಗಳನ್ನುಕೈಗೊಂಡು ಸ್ಥಳೀಯರು, ಮಹಿಳೆಯರು ಹಾಗೂಹಿರಿಯ ನಾಗರಿಕರ ಸಲಹೆ ಸೂಚನೆಗಳನ್ನು ಸ್ವೀಕರಿಸಿಗ್ರಾಮಗಳ ಸಮಗ್ರ ಅಭಿವೃದ್ಧಿ ಒತ್ತು ನೀಡಲಾಗಿರುವಅಂಶಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಪರಿಗಣಿಸಲಾಗಿದೆ.
ಜಿಲ್ಲೆಯ ಶಾಲೆಗಳಲ್ಲಿ ಮೂಲ ಸೌಕರ್ಯ ಹಾಗೂ ಹೆಚ್ಚಿನ ನಿಗಾವಹಿಸಿ ಶಾಲಾ ಮಕ್ಕಳಿಗೆ ಗ್ರಂಥಾಲಯ, ಆಟದ ಮೈದಾನ, ಕುಡಿವ ನೀರಿನ ವ್ಯವಸ್ಥೆ, ಉತ್ತಮಶೌಚಾಲಯ ಸೌಲಭ್ಯ ಕಲ್ಪಿಸಿಕೊಟ್ಟು ಪರಿಣಿತ ಶಿಕ್ಷಕರನ್ನು ಒದಗಿಸಿ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆ ಆಕರ್ಷಿತರನ್ನಾಗಿ ಮಾಡುತ್ತಿರುವುದೂ ಗಮನಾರ್ಹ ಅಂಶವಾಗಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಸ್ವತ್ಛಭಾರತ ಅಭಿಯಾನವನ್ನು ಎಲ್ಲಾ ಗ್ರಾಪಂ ಮಟ್ಟದಲ್ಲಿಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಸಾರ್ವಜನಿಕರಿಗೆ ಅರಿವು ಮೂಡಿಸಿ ಸ್ವತ್ಛತೆಯನ್ನುಕಾಪಾಡಲು ಅನೇಕ ಕಾರ್ಯಕ್ರಮಗಳನ್ನುಕೈಗೊಂಡಿರುವುದೂ ಪ್ರಶಸ್ತಿಗೆ ಸಹಕಾರಿಯಾಗಿದೆ.ಜಿಪಂನಿಂದ ಸಾರ್ವಜನಿಕರ 863 ಅರ್ಜಿಗಳನ್ನುಹಾಗೂ ಆರ್‌ಟಿಐ ಯಡಿಯಲ್ಲಿ ಬಂದಂತಹಅರ್ಜಿಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ತಕ್ಷಣಸ್ಪಂದಿಸಿರುವುದು, ಜೊತೆಗೆ ಎಲ್ಲ ಯೋಜನೆಗಳಅನುಷ್ಠಾನದ ಬಗ್ಗೆ ಮಾಹಿತಿಯನ್ನು ಸರ್ಕಾರಕ್ಕೆಸಕಾಲದಲ್ಲಿ ಒದಗಿಸಿ ಉತ್ತಮ ಕಾರ್ಯನಿರ್ವಹಣೆ ಮಾಡಿವುದನ್ನು ಪರಿಗಣಿಸಲಾಗಿದೆ.
ಏ.24 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಮಾಡಲಾಗುವುದು ಮತ್ತು ಪ್ರಶಸ್ತಿಯ ಮೊತ್ತವನ್ನುನೇರ ವರ್ಗಾವಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.