Advertisement

ಅನುಷಾ, ರಕ್ಷಿತಾ  ಆವಿಷ್ಕಾರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ

01:21 AM Aug 15, 2021 | Team Udayavani |

ಕುಂದಾಪುರ: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ರಾಷ್ಟ್ರ ಮಟ್ಟದ ಶಾಲಾ ಮಕ್ಕಳ “ಸಿಎಸ್‌ಐಆರ್‌ ಇನೋವೇಶನ್‌ ಅವಾರ್ಡ್‌’ಗೆ ಅಲ್ಬಾಡಿ – ಆರ್ಡಿಯ ಚಾರಮಕ್ಕಿ ನಾರಾ ಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಅನುಷಾ ಮತ್ತು ರಕ್ಷಿತಾ ನಾಯ್ಕ ಅವರ ಆವಿ ಷ್ಕಾರವಾದ ಗ್ಯಾಸ್‌ ಸೇವಿಂಗ್‌ ಕಿಟ್‌ (ಜಿಎಸ್‌ಕೆ) ಆಯ್ಕೆಯಾಗಿದೆ. ಇವರಿಬ್ಬರೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Advertisement

“ಜಿಎಸ್‌ಕೆ’ ತಯಾರಿಗೆ 600 ರೂ. ತಗಲಿದೆ. ಅದನ್ನು ಗ್ಯಾಸ್‌ ಸ್ಟವ್‌ಗೆ ಅಳವಡಿಸಿದರೆ ಆಹಾರ ಪದಾರ್ಥಗಳು ಬೇಯುತ್ತಿರುವಾಗಲೇ ನಾಲ್ವರು ಸದಸ್ಯರ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ಸಿದ್ಧವಾಗುತ್ತದೆ.   ಎಲ್ಲರೂ ಇದನ್ನು ಅಳವಡಿಸಿಕೊಂಡರೆ ದಿನವೊಂದಕ್ಕೆ ಲಕ್ಷಗಟ್ಟಲೆ ಟನ್‌ ಎಲ್‌ಪಿಜಿ ಉಳಿತಾಯವಾಗುತ್ತದೆ ಎನ್ನುವುದು ಈ ವಿದ್ಯಾರ್ಥಿನಿಯರ ದೂರದೃಷ್ಟಿ. ಉಪಕರಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪೇಟೆಂಟ್‌ ಪಡೆಯುವತ್ತ ದೃಷ್ಟಿ ನೆಟ್ಟಿದ್ದಾರೆ.

ಎರಡನೇ ಗೌರವ :

ಈ ಶಾಲೆಯು ಎರಡನೇ ಬಾರಿಗೆರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪ್ರಧಾನಿ ಮೋದಿಯವರ “ಪರೀಕ್ಷಾ ಪೇ ಚರ್ಚಾ’ಕ್ಕಾಗಿ ನಿರ್ಮಿಸಿದ್ದ ಪ್ರೋಮೋ ವೀಡಿಯೋ ರಾಷ್ಟ್ರಾದ್ಯಂತ ಪ್ರಸಾರವಾಗಿ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ, ಪ್ರಧಾನಿ ಜತೆ ಸಂವಾದ ಕಾರ್ಯಕ್ರಮಕ್ಕೆ ಅನುಷಾ ಆಯ್ಕೆಯಾಗಿದ್ದರು.

ಅವಿರತ ಪರಿಶ್ರಮ :

Advertisement

ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್‌ ಮಾರ್ಗದರ್ಶನ, ಮುಖ್ಯಶಿಕ್ಷಕ ಶೇಖರ್‌ ಶೆಟ್ಟಿಗಾರ್‌ ನೇತೃತ್ವದಲ್ಲಿ ನಡೆದ ಆವಿಷ್ಕಾರಕ್ಕೆ ಶಿಕ್ಷಕರಾದ ಶ್ರೀಕಾಂತ್‌ ನಾಯಕ್‌, ಪ್ರೇಮನಾಥ್‌ ತೋಳಾರ್‌, ಉದಯ್‌ ಶೆಟ್ಟಿ, ರಮೇಶ್‌, ಮಾಲತಿ, ಮಾಲಿನಿ ಕೆ.ಆರ್‌., ಸುಮಲತಾ, ಬೋಧಕೇತರ ಸಿಬಂದಿ ಜ್ಯೋತ್ಸ್ನಾ  ಮತ್ತು ಶಿಕ್ಷಕ ಸುರೇಶ್‌ ಮರಕಾಲ ಮಾರ್ಗದರ್ಶನ ನೀಡಿದ್ದರು.

ಪ್ರಧಾನಿಯಿಂದ ಪ್ರಶಸ್ತಿ ಹಸ್ತಾಂತರ ದಿಲ್ಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ದೇಶದ 14 ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೆ. 26ರಂದು ಕಾರ್ಯಕ್ರಮ ನಿಗದಿಯಾಗಿದ್ದು, ಕೋವಿಡ್‌ ಕಾರಣದಿಂದ

ಯಾವ ವಿಧಾನದಲ್ಲಿ ನಡೆಯಲಿದೆ ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯ ಹೇಳಿದೆ.

ವ್ಯಾಪಕ ಪ್ರಶಂಸೆ : ವಿದ್ಯಾರ್ಥಿನಿಯರ ಸಾಧನೆಯನ್ನು ಜನಪ್ರತಿನಿಧಿಗಳು, ಇಲಾಖೆಯ ಉನ್ನತ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ದಿಲ್ಲಿಯ ಎಂಎಚ್‌ಆರ್‌ಡಿ ನಿರ್ದೇಶಕರು, ರಾಜ್ಯ ಶಿಕ್ಷಣ ಇಲಾಖೆಯ ಪ್ರ. ಕಾರ್ಯದರ್ಶಿ, ಡಿಡಿಪಿಐ, ಡಯಟ್‌ ಪ್ರಾಂಶುಪಾಲರು, ಕುಂದಾಪುರ ಬಿಇಒ, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವಿದ್ಯಾಭಿಮಾನಿಗಳು ಅಭಿ ನಂದಿಸಿದ್ದಾರೆ.

ದೇಶದ ಏಕೈಕ ಸರಕಾರಿ ಶಾಲೆ! :

ರಾಷ್ಟ್ರ ಮಟ್ಟದಲ್ಲಿ ಈ ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾದ 14 ಶಾಲೆಗಳಲ್ಲಿ ಅಲಾºಡಿ – ಆರ್ಡಿ ಸರಕಾರಿ ಪ್ರೌಢಶಾಲೆ ಒಂದು. ಈ ಪ್ರಶಸ್ತಿಗೆ ಆಯ್ಕೆಯಾದ ದೇಶದ ಏಕೈಕ ಸರಕಾರಿ ಪ್ರೌಢಶಾಲೆ, ಕರ್ನಾಟಕದ ಒಂದೇ ಪ್ರೌಢಶಾಲೆ ಎಂಬುದು ಹೆಮ್ಮೆ.

Advertisement

Udayavani is now on Telegram. Click here to join our channel and stay updated with the latest news.

Next