ಬೆಂಗಳೂರು: ಕೆಎಸ್‌ಆರ್‌ಟಿಸಿ ಪರಿಚಯಿಸಿದ “ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಪ್ಯಾಸೆಂಜರ್ ಇನ್‌ಫಾರ್ಮೇಷನ್ ಸಿಸ್ಟ್‌ಂ’ ಉಪಕ್ರಮಕ್ಕೆ “ಬ್ಯುಸಿನೆಸ್ ವರ್ಲ್ಡ್ ಸ್ಮಾರ್ಟ್ ಸಿಟೀಸ್ ರಾಷ್ಟ್ರೀಯ ಪ್ರಶಸ್ತಿ’ ಲಭಿಸಿದೆ.
ದೇಶದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಈ ವ್ಯವಸ್ಥೆ ಅಳವಡಿಸಿದ ಮೊದಲ ಸಂಸ್ಥೆ ಕೆಎಸ್‌ಆರ್‌ಟಿಸಿ ಆಗಿದ್ದು,
ಎರಡು ಸಾವಿರ ಬಸ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ಇದರಿಂದ ಪ್ರಯಾಣಿಕರಿಗೆ ಸಂವಹನ ವ್ಯವಸ್ಥೆ, ಜಿಪಿಎಸ್ ಆಧಾರಿತ ಬಸ್‌ಗಳ ಆಗಮನ- ನಿರ್ಗಮನ ಕುರಿತು ಮಾಹಿತಿ ದೊರೆಯಲಿದೆ. ದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಕೇಂದ್ರ ನಗರಾಭಿವೃದಿಟಛಿ ಸಚಿವ ಹದೀìಪ್ ಸಿಂಗ್ ಪುರಿ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. ತೆಲಂಗಾಣದ ಮಾಹಿತಿ ತಂತ್ರಜ್ಞಾನ ಮತ್ತು ಪೌರಾಡಳಿತ ಸಚಿವ
ಕೆ.ಟಿ.ರಾಮರಾವ್ ಮತ್ತಿತರರು ಇದ್ದರು.