Advertisement

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

01:39 AM Jan 07, 2025 | Team Udayavani |

ಚೆನ್ನೈ: ಹೊಸ ವರ್ಷದಲ್ಲೂ ತಮಿಳುನಾಡು ಸರಕಾರ ಹಾಗೂ ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಜಟಾಪಟಿ ಮುಂದುವರಿದಿದೆ. ಸೋಮವಾರ ತಮಿಳುನಾಡು ವಿಧಾ­ನಸಭೆಯಲ್ಲಿ ಭಾಷಣ ಮಾಡದೆ, ಸಂವಿಧಾನಕ್ಕೆ ಅವ­ಮಾ­ನ­­­ವಾಗಿದೆ ಎಂದು ಆರೋಪಿಸಿ ಆರೋಪಿಸಿ ರಾಜ್ಯಪಾಲ ಆರ್‌.ಎನ್‌.ರವಿ ಸದನದಿಂದ ಹೊರನಡೆದಿದ್ದಾರೆ.

Advertisement

ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಮೂಲಭೂತ ಕರ್ತವ್ಯವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ರಾಜ್ಯಪಾಲರ ಭಾಷಣದ ಮೊದಲ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಆದರೆ ವಿಧಾನಸಭೆಯಲ್ಲಿ “ತಮಿಳು ತಾಯ್‌’ ನಾಡಗೀತೆ ಮಾತ್ರ ಹಾಡಲಾಗಿದೆ. ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಕಾರಣ ಅವರು ಸದನದಿಂದ ಹೊರ ನಡೆದಿದ್ದಾರೆ ಎಂದು ರಾಜಭವನ ಹೇಳಿದೆ.

ರಾಜ್ಯಪಾಲರ ನಡೆಯ ಬಗ್ಗೆ ಸಿಎಂ ಎ.ಕೆ.ಸ್ಟಾಲಿನ್‌ ಆಕ್ರೋಶ ವ್ಯಕ್ತಪಡಿಸಿ ತಮಿಳು ನಾಡು ವಿಧಾನಸಭೆ, ಚುನಾಯಿತ ಸರಕಾರವನ್ನು ಅವಮಾನಿಸುವ ಚಾಳಿ ರಾಜ್ಯಪಾಲರಿಗೆ ರೂಢಿಯಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next