Advertisement

ಗಾಂಧಿ ಕುಟುಂಬದ 4 ಪೀಳಿಗೆ ಮಾಡಿದ್ದೇನು?

06:00 AM Apr 29, 2018 | Team Udayavani |

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಏನು ಆಡಳಿತ ಮಾಡಿದೆ ಎಂದು ಪ್ರಶ್ನಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಬಾಬಾ, ತಮ್ಮ ಕುಟುಂಬದ ನಾಲ್ಕು ತಲೆಮಾರಿನ ನಾಯಕರು ದೇಶಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ಜನರಿಗೆ ಹೇಳಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ್ದಾರೆ.

Advertisement

ಇಳಕಲ್ಲದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷ ನಾವು ಮಾಡಿದ್ದೇನು ಎಂದು ರಾಹುಲ್‌ ಗಾಂಧಿಗೆ ಉತ್ತರಿಸುವ ಅಗತ್ಯವಿಲ್ಲ. ಆದರೆ, ದೇಶದ ಜನ ಗಾಂಧಿ ಕುಟುಂಬದ ಕೊಡುಗೆ ಬಗ್ಗೆ ಪ್ರಶ್ನಿಸುತ್ತಿದ್ದು ಮೊದಲು ಅವರಿಗೆ ಉತ್ತರಿಸಲಿ ಎಂದರು.

ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್‌, ಪದೇ ಪದೆ ಈ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಆದರೂ, ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದೇನೆ. ಈ ಹಿಂದೆ ಯುಪಿಎ ಸರ್ಕಾರದ ಅವ ಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಅನುದಾನ ಕೇವಲ 88 ಸಾವಿರ ಕೋಟಿ ರೂ. ಮಾತ್ರ. ಆದರೆ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರ್ಕಾರ 14ನೇ ಹಣಕಾಸಿನಲ್ಲಿ 2.19 ಲಕ್ಷ ಕೋಟಿ ರೂ. ನೀಡಿದೆ. ಆದರೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಾತ್ರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಜತೆಗೆ ಮೋದಿ ಆಡಳಿತಕ್ಕೆ ಬಂದ ನಂತರ ಕರ್ನಾಟಕಕ್ಕೆ 219 ಸಾವಿರ ಕೋಟಿ ಅನುದಾನ ನೀಡಿದೆ. ಇದಲ್ಲದೇ ಮುದ್ರಾ ಬ್ಯಾಂಕ್‌ನಿಂದ 39 ಸಾವಿರ ಕೋಟಿ, ಸ್ಮಾರ್ಟ್‌ ಸಿಟಿಗಾಗಿ 960 ಕೋಟಿ, ಅಮೃತ್‌ ಮಿಷನ್‌ 4900 ಕೋಟಿ, ಸ್ವತ್ಛ ಭಾರತ 204 ಕೋಟಿ, ನಗರ ಸಾರಿಗೆಗೆ 239 ಕೋಟಿ, ಬೆಂಗಳೂರ ನಗರಕ್ಕಾಗಿ 2600 ಕೋಟಿ, ಬೆಂಗಳೂರು ಮೆಟ್ರೋ 500 ಕೋಟಿ, ಕೃಷಿಗಾಗಿ 219 ಕೋಟಿ, ಪ್ರಧಾನ ಮಂತ್ರಿ ಆವಾಸ್‌ 219 ಕೋಟಿ, ರಸ್ತೆಗಾಗಿ 200 ಕೋಟಿ, ರೈಲ್ವೆಗಾಗಿ 2100 ಕೋಟಿ ರೂ. ಹೀಗೆ ಅನುದಾನಗಳ ಸುರಿಮಳೆಯನ್ನೇ ಹರಿಸಿದೆ ಎಂದರು.

ಬಿಎಸ್‌ವೈ ಕೆಳಗಿಳಿಯಲು ಕಾಂಗ್ರೆಸ್‌ ಕಾರಣ
2008ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಕಾಂಗ್ರೆಸ್‌ನವರ ಷಡ್ಯಂತ್ರದಿಂದಾಗಿ ಕೆಳಗಿಳಸಬೇಕಾಯಿತು. ಆದರೆ ಈಗ ಪರಿವರ್ತನೆ ಗಾಳಿ ಭರದಿಂದ ಬೀಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ 5 ವರ್ಷಗಳ ಸಂಪೂರ್ಣ ಆಡಳಿತ ನಡೆಸುವ ಒಂದು ಸುವರ್ಣ ಅವಕಾಶ ನೀವುಗಳು ನಿಮ್ಮ ಮತ ಚಲಾಯಿಸುವ ಮೂಲಕ ಆಶೀರ್ವದಿಸಬೇಕು ಎಂದರು.

Advertisement

ಪಾಪಡ್‌ ಅಲ್ಲ ರೊಟ್ಟಿ
ಅಮಿತ್‌ ಶಾ ಅವರಿಗಾಗಿ ಬಾಗಲಕೋಟೆಯಲ್ಲಿ ತೊಗರಿ ಬೇಳೆ, ಬೀನ್ಸ್‌ ಪಲ್ಯ, ಶಾವಿಗೆ ಪಾಯಸ, ಮಜ್ಜಿಗೆ, ಶೇಂಗಾ ಚಟ್ನಿ, ಪುಟಾಣಿ ಚಟ್ನಿ,  ಮಾವಿನ ಶೀಕರಣಿ, ರೊಟ್ಟಿ, ಚಪಾತಿ, ಅನ್ನ-ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ಜೋಳದ ರೊಟ್ಟಿ ಕೈಯಲ್ಲಿ ಹಿಡಿದು, ಏ ಪಾಪಡ್‌ ಹೈ ಕ್ಯಾ.. ಎಂದು ಪ್ರಶ್ನಿಸಿದರು. ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರು, “ಏ ಪಾಪಡ್‌ ನಹೀ ಸರ್‌, ಏ ರೊಟಿ ಹೈ..ನಾರ್ಥ್ ಕರ್ನಾಟಕಕಾ ಸ್ಪೆಶಲ್‌’ ಎಂದು ಹೇಳಿದರು.

ಅಧಿಕಾರಕ್ಕೆ ಬಂದ ತಕ್ಷಣ ಸಿದ್ದು ಜೈಲಿಗೆ
ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ್ಯಂಡ್‌ ಗ್ಯಾಂಗ್‌ ಮಾಡಿರುವ ಹಗರಣಗಳನ್ನು ಬಯಲಿಗೆಳೆದು ಅವರೆಲ್ಲರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ಅವರು, ಲೋಕಾಯುಕ್ತ ಸಂಸ್ಥೆ ಬಲಪಡಿಸಿ, ಕಾಂಗ್ರೆಸ್‌ನವರ ಹರಿಕಥೆ ಬಯಲು ಮಾಡುತ್ತೇನೆ ಎಂದಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ
ಕಾಂಗ್ರೆಸ್‌ ಸರಕಾರದ ಮೇಲೆ ಇಲ್ಲ ಸಲ್ಲದ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಭ್ರಷ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಕದಲ್ಲಿಯೇ ಇರುವುದನ್ನು ಮರೆತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಸಾಲು ಸಾಲಾಗಿ ಜೈಲಿಗೆ ಹೋಗಿ ಬಂದವರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next