Advertisement

ಒಂದು ವಿಕೆಟ್ ಗಾಗಿ ಒಂದು ವರ್ಷದಿಂದ ಕಾಯುತ್ತಿದ್ದಾರೆ ನಥನ್ ಲಿಯಾನ್

03:47 PM Dec 10, 2021 | Team Udayavani |

ಬ್ರಿಸ್ಬೇನ್: ಆಸ್ಟ್ರೇಲಿಯಾ ಕಂಡ ಸರ್ವಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರಾದ ನಥನ್ ಲಿಯಾನ್ ಒಂದು ವಿಕೆಟ್ ಗಾಗಿ ಪರದಾಡುತ್ತಿದ್ದಾರೆ. ಬಹುತೇಕ ಒಂದು ವರ್ಷದಿಂದ ಒಂದೇ ಒಂದು ವಿಕೆಟ್ ಗಾಗಿ ಕಾಯುತ್ತಿರುವ ನಥನ್ ಲಿಯಾನ್ ಗೆ ಆ್ಯಶಸ್ ನ ಮೊದಲ ಟೆಸ್ಟ್ ಪಂದ್ಯದಲ್ಲೂ ಅದು ಮರೀಚಿಕೆಯಾಗಿದೆ.

Advertisement

ಟೆಸ್ಟ್ ಕ್ರಿಕೆಟ್ ನಲ್ಲಿ ಇದುವರೆಗೆ 399 ವಿಕೆಟ್ ಪಡೆದಿರುವ ಲಿಯಾನ್ 400 ವಿಕೆಟ್ ದಾಖಲೆ ಮಾಡಲು ಕಾಯುತ್ತಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಭಾರತ ವಿರುದ್ಧದ ಸರಣಿಯಲ್ಲಿ ಲಿಯಾನ್ ಕೊನೆಯದಾಗಿ ವಿಕೆಟ್ ಬೇಟೆಯಾಡಿದ್ದರು.

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಲಿಯಾನ್ ಪಡೆದಿದ್ದು ಕೇವಲ 9 ವಿಕೆಟ್. ಇದಕ್ಕಾಗಿ ಅವರು 496 ರನ್ ನೀಡಿದ್ದರು. ಇದಾದ ಬಳಿಕ ಲಿಯಾನ್ ಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ. 400 ವಿಕೆಟ್ ಸಾಧನೆಯ ಹೊಸ್ತಿಲಲ್ಲಿ ನಿಂತಿರುವ ಆಸೀಸ್ ಆಫ್ ಸ್ಪಿನ್ನರ್ ಗೆ ಒಂದು ವಿಕೆಟ್ ಮಾತ್ರ ಕಬ್ಬಿಣದ ಕಡಲೆಯಾಗಿದೆ.

ಇದನ್ನೂ ಓದಿ:She said YES..! ಆ್ಯಶಸ್ ಪಂದ್ಯದಲ್ಲಿ ಹೀಗೊಂದು ಪ್ರೇಮ ಪ್ರಸಂಗ: ವಿಡಿಯೋ

34 ವರ್ಷದ ನಥನ್ ಲಿಯಾನ್ 101 ಪಂದ್ಯವಾಡಿದ್ದಾರೆ. ಲಿಯಾನ್ 400 ವಿಕೆಟ್ ಕಿತ್ತರೆ ಈ ಸಾಧನೆ ಮಾಡಿದ ಆಸೀಸ್ ನ ಮೂರನೇ ಬೌಲರ್ ಎನಿಸಲಿದ್ದಾರೆ. ಶೇನ್ ವಾರ್ನೆ (708) ಮತ್ತು ಗ್ಲೆನ್ ಮೆಕ್ ಗ್ರಾತ್ (563) ಈ ಸಾಧನೆ ಮಾಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next