Advertisement

400 ಟೆಸ್ಟ್ ವಿಕೆಟ್ ಕಿತ್ತು ದಾಖಲೆ ಬರೆದ ನಥನ್ ಲಿಯಾನ್

09:12 AM Dec 11, 2021 | Team Udayavani |

ಬ್ರಿಸ್ಬೇನ್: ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಥನ್ ಲಿಯಾನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 400ನೇ ವಿಕೆಟ್ ಪಡೆದು ಸಂಭ್ರಮಿಸಿದರು. ಗಾಬಾ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್ ವಿಕೆಟ್ ಪಡೆದ ಲಿಯಾನ್ 400ನೇ ಸಾಧನೆ ಮಾಡಿದರು.

Advertisement

ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬೌಲರ್, ಎರಡನೇ ಸ್ಪಿನ್ನರ್ ಎನಿಸಿದರು. ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್ ಗ್ರಾತ್ ಅವರು ಈ ಮೊದಲು 400ಕ್ಕೂ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ನಾಯಕತ್ವ ವಿವಾದ ತಂಡದ ಮೇಲೆ ಪರಿಣಾಮ ಬೀರದಿರಲಿ

ಲಿಯಾನ್ ತನ್ನ 101 ನೇ ಟೆಸ್ಟ್‌ನಲ್ಲಿ, ಈ ಸಾಧನೆ ಮಾಡಿದ ವಿಶ್ವದಾದ್ಯಂತ ಕೇವಲ 16 ನೇ ಆಟಗಾರರಾದರು.  ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ನಂತರ ಮೂರನೇ ಆಸ್ಟ್ರೇಲಿಯನ್ ಆಟಗಾರರಾದರು.

ಶೇನ್ ವಾರ್ನ್ ಅವರು 708 ವಿಕೆಟ್ ಪಡೆದಿದ್ದರೆ, ಮೆಕ್ ಗ್ರಾತ್ ಅವರು 563 ಟೆಸ್ಟ್ ವಿಕೆಟ್ ಗಳನ್ನು ಕಿತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next