Advertisement

Test Cricket; ಕೊರ್ಟ್ನಿ ವಾಲ್ಶ್ ದಾಖಲೆ ಮುರಿದ ಆಸ್ಟ್ರೇಲಿಯಾ ನಥನ್ ಲಿಯಾನ್

04:38 PM Mar 01, 2024 | Team Udayavani |

ವೆಲ್ಲಿಂಗ್ಟನ್: ಆಸ್ಟ್ರೇಲಿಯಾದ ಸ್ಟಾರ್ ಆಫ್ ಸ್ಪಿನ್ನರ್ ನಥನ್ ಲಿಯಾನ್ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಕೊರ್ಟ್ನಿ ವಾಲ್ಶ್ ಅವರ ಟೆಸ್ಟ್ ವಿಕೆಟ್ ದಾಖಲೆ ಮುರಿದು ನಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದರು.

Advertisement

ಕಿವೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಲಿಯಾನ್, ಈ ದಾಖಲೆ ಮುರಿದರು. ಅವರು 128 ಟೆಸ್ಟ್ ಪಂದ್ಯದಲ್ಲಿ 521 ರನ್ ಕಿತ್ತಿದ್ದಾರೆ.

ಈ ವೇಳೆ ಅವರು ಕೊರ್ಟ್ನಿ ವಾಲ್ಶ್ ಅವರು 519 ವಿಕೆಟ್ ಗಳ ದಾಖಲೆಯನ್ನು ಮುರಿದು ಏಳನೇ ಅಗ್ರ ವಿಕೆಟ್ ಟೇಕರ್ ಆಗಿ ಮೂಡಿದರು. ಇದುವರೆಗೆ ಟೆಸ್ಟ್ ನಲ್ಲಿ 32440 ಎಸೆತ ಎಸೆದಿರುವ ಲಿಯಾನ್ ಅವರು 31608 ಎಸೆತಗಳವರೆಗೆ ಒಂದೇ ಒಂದು ನೋ ಬಾಲ್ ಎಸೆದಿರಲಿಲ್ಲ ಎನ್ನುವುದು ವಿಶೇಷ.

ಅವರು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಜೇಮ್ಸ್ ಆಂಡರ್ಸನ್, ಅನಿಲ್ ಕುಂಬ್ಳೆ, ಸ್ಟುವರ್ಟ್ ಬ್ರಾಡ್ ಮತ್ತು ಗ್ಲೆನ್ ಮೆಕ್ ಗ್ರಾಥ್ ಅವರಿಗಿಂತ ಹಿಂದಿದ್ದಾರೆ. ಅವರ ಗಮನಾರ್ಹ ಸಾಧನೆಗಳಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ 116 ವಿಕೆಟ್ ಕಿತ್ತಿರುವುದು ದಾಖಲೆ.

Advertisement

Udayavani is now on Telegram. Click here to join our channel and stay updated with the latest news.

Next