Advertisement

ಡಾ|ಶರಣಪ್ರಕಾಶಗೆ ಶ್ರೇಷ್ಠ ವೈದ್ಯಶ್ರೀ ರಾಷ್ಟ್ರೀಯ ಪ್ರಶಸಿ

04:55 PM Dec 27, 2020 | Suhan S |

ಕಲಬುರಗಿ: ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಉಡಗಿ ಅವರಿಗೆ ಶ್ರೇಷ್ಠ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಹೊಸ ವರ್ಷ 2021ರ ಶುಕ್ರವಾರದಂದು ಡಾ.ಪಿ.ಎಸ್‌.ಶಂಕರ ಪ್ರತಿಷ್ಠಾನದವತಿಯಿಂದ ಹಮ್ಮಿಕೊಳ್ಳುವ ಸಮಾರಂಭದಲ್ಲಿ ಶ್ರೇಷ್ಠ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ಜರುಗಿದ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ನರೇಂದ್ರ ಬಡಶೇಷಿ ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ರಾಜ್ಯದಲ್ಲಿ, ವಿಶೇಷವಾಗಿ ಕಲಬುರಗಿಯಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿವಿಧ ಜಿಲ್ಲೆಗಳಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನೇಕ ರಾಜ್ಯದ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಗಳು ಸ್ಥಾಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಇದಲ್ಲದೆ ಕಲಬುರಗಿಯಲ್ಲಿ ಸ್ಥಾಪನೆಯಾಗಿದ್ದ ಕ್ಯಾನ್ಸರ್‌ ಆಸ್ಪತ್ರೆಯನ್ನು ನವೀಕರಣ ಹಾಗೂಕ್ರಿಯಾಶೀಲದಿಂದ ಕೆಲಸ ಮಾಡಲು ಡಾ.ಶರಣಪ್ರಕಾಶಪಾಟೀಲರ ಶ್ರಮ ಅರ್ಥಪೂರ್ಣವಾಗಿದೆ. ಇದರ ಜತೆಯಲ್ಲಿ ಜಯದೇವ ಹೃದಯರೋಗ ಆಸ್ಪತ್ರೆಸ್ಥಾಪನೆ ಮತ್ತು ಕ್ರಿಯಾಶೀಲತೆಯಲ್ಲಿ ಅವರ ಕೊಡುಗೆಅಪಾರವಾಗಿದೆ. ಡಾ.ಪಿ.ಎಸ್‌.ಶಂಕರ ಪ್ರತಿಷ್ಠಾನದವತಿಯಿಂದ ಈ ವರ್ಷ 10,000 ರೂ. ನಗದು ಪುರಸ್ಕಾರ,ಪ್ರಶಸ್ತಿ ಪತ್ರ ನೀಡಿ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಿಗೆ ಗೌರವ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next