ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಎನ್‌ಎಟಿಎ-2019) ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಕಾಂಕ್ಷಾ ವಿ.ಎ. (160), ರೋಹಿತ್ ಆರ್. (154), ರಕ್ಷಿತ್ ಆರ್. (150), ಕೇಶವಮೂರ್ತಿ (142), ಲಿಖೀತ್ ಕೆ. (142), ಶ್ರೀನಿಧಿ (142), ಚಂದನ ಎ.ಎಂ. (141) ಹಾಗೂ ಮೆಲ್ಬಿನ್ ಅಲೆಕ್(140) ಅವರು 140ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ ಎಂದು ಅವರು ಹೇಳಿದರು.
ಇವರಲ್ಲದೆ, ಮೈತ್ರಿ (139), ಪ್ರಿಯಾಂಕಾ (139), ಪ್ರದ್ಯುಮ್ನ (139), ಆಶಿಶ್ ಎಸ್. (138), ಕವನಾ ಜೆ. (138), ಸಮೀಕ್ಷಾ (136), ಕಾರ್ತಿಕ್ ಡಿ. (136), ವಿಕಾಸ್ ವಿ.ಕಶ್ಯಪ್ (134), ವರ್ಷಿಣಿ ಅಗಸಗಿ (132), ರಕ್ಷಿತಾ ಎಂ.ಡಿ. (132), ಪ್ರಜ್ವಲ್ ನಾಯಕ್ (132), ಪ್ರಜ್ವಲ್ ಎಸ್. (132), ಅನ್ವಿತಿ ಎನ್. ಎಚ್. (132), ಪ್ರತೀಕಾ ವಿ. (131), ನವ್ಯಾ ಎಸ್.ಎನ್. (131), ಪುನೀತ್ ಕುಮಾರ್ ವಿ. (130), ಮನೋಜ್ ಎಂ.ಆರ್. (130), ಮನೋಜ್ ಎನ್. (130) ಸೇರಿದಂತೆ ಒಟ್ಟು 26 ವಿದ್ಯಾರ್ಥಿಗಳು 130ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.
ಜತೆಗೆ 52 ಮಂದಿ 125ಕ್ಕಿಂತ ಅಧಿಕ, 87 ಮಂದಿ 120ಕ್ಕಿಂತ ಅಧಿಕ, 166 ಮಂದಿ 110ಕ್ಕಿಂತ ಅಧಿಕ, 265 ಮಂದಿ 100ಕ್ಕಿಂತ ಅಧಿಕ, 353 ಮಂದಿ 90ಕ್ಕಿಂತ ಅಧಿಕ , ಹಾಗೂ 428 ಮಂದಿ 80ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.
ಆರ್ಕಿಟೆಕ್ಚರ್ ಕೋರ್ಸ್ ಸೇರಲು ಅನುಕೂಲ ಕಲ್ಪಿಸುವ ‘ನಾಟಾ’ದಲ್ಲಿ ಆಳ್ವಾಸ್ ಪ್ರತೀ ವರ್ಷ ಉತ್ತಮ ಸಾಧನೆ ತೋರುತ್ತಿದೆ ಎಂದ ಡಾ| ಆಳ್ವರು ಕಳೆದ ಸಾಲಿನಲ್ಲಿ ಆಳ್ವಾಸ್‌ನ 326 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ರಾಜ್ಯ ಮಟ್ಟದಲ್ಲಿ ವೈಷ್ಣವಿ ನಾಯಕ್ 2ನೇ ಹಾಗೂ ಶಶಾಂಕ್ ಡಿ. 5ನೇ ರ್‍ಯಾಂಕ್ ಗಳಿಸಿದ್ದರು ಎಂದು ಉಲ್ಲೇಖೀಸಿದರು.
ಆಳ್ವಾಸ್ ಪಿಯು ಕಾಲೇಜು ಪ್ರಾಂಶುಪಾಲ ಪ್ರೊ| ರಮೇಶ್ ಶೆಟ್ಟಿ, ಪಿಆರ್‌ಒ ಡಾ| ಪದ್ಮನಾಭ ಶೆಣೈ, ‘ನಾಟಾ’ ಸಂಯೋಜಕರಾದ ಗಣನಾಥ್, ಅಶ್ವತ್ಥ್ ಉಪಸ್ಥಿತರಿದ್ದರು.