ಭೋಪಾಲ್: ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಇಂದು ಸೆಹೋರ್ ಜಿಲ್ಲೆಯ ನಸ್ರುಲ್ಲಗಂಜ್ ಹೆಸರನ್ನು ಭೈರುಂಡಾ ಎಂದು ಬದಲಾಯಿಸಿದೆ.
ಗೆಜೆಟ್ ಅಧಿಸೂಚನೆಯಲ್ಲಿ ಇದನ್ನು ತಿಳಿಸಿರುವ ರಾಜ್ಯ ಸರ್ಕಾರವು ‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ತಕ್ಷಣವೇ ಜಾರಿಗೆ ಬರುವಂತೆ ‘ಭೈರುಂಡ’ ಎಂದು ಬದಲಾಯಿಸಲಾಗಿದೆ” ಎಂದಿದೆ.
ಈ ವರ್ಷದ ಫೆಬ್ರವರಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಭೋಪಾಲ್‌ನ ಇಸ್ಲಾಂ ನಗರ ಗ್ರಾಮದ ಹೆಸರನ್ನು ಜಗದೀಶ್ ಪುರ ಎಂದು ಬದಲಾಯಿಸಿತ್ತು. ಹೆಸರು ಬದಲಾವಣೆಗೆ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ. ಜಗದೀಶ್‌ಪುರ (ಹಿಂದಿನ ಇಸ್ಲಾಂ ನಗರ) ಗ್ರಾಮವು ಭೋಪಾಲ್ ನಿಂದ ಸುಮಾರು 12 ಕಿಮೀ ದೂರದಲ್ಲಿದೆ. ಇದು ಕೋಟೆಗಳಿಗೆ ಹೆಸರುವಾಸಿಯಾಗಿದೆ. ಇಸ್ಲಾಂ ನಗರಕ್ಕೆ 308 ವರ್ಷಗಳ ಹಿಂದೆ ಜಗದೀಶ್‌ಪುರ ಎಂಬ ಹೆಸರು ಇತ್ತು ಎಂದು ಬಿಜೆಪಿ ಹೇಳಿಕೊಂಡಿದೆ.
ಇದನ್ನೂ ಓದಿ:ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ
ಕಳೆದ ವರ್ಷ, ಹಿಶಾಂಗಾಬಾದ್ ಹೆಸರನ್ನು ನರ್ಮದಾಪುರಂ ಮತ್ತು ನಸ್ರುಲ್ಲಾಗಂಜ್ ಹೆಸರನ್ನು ಭೈರುಂಡಾ ಎಂದು ಬದಲಾಯಿಸಲು ರಾಜ್ಯ ಸರ್ಕಾರ ಅನುಮತಿ ಪಡೆದಿತ್ತು. ಇಂದು ಅಧಿಸೂಚನೆಯನ್ನು ಹೊರಡಿಸಲಾಯಿತು.