Advertisement

ಕಾರ್ಕಳದ ನಾಸಿರಾ ಬಾನು ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆ

09:34 AM Jul 14, 2019 | keerthan |

ಕಾರ್ಕಳ: ಬಜಗೋಳಿ ಸಮೀಪದ ನಲ್ಲೂರು ಗ್ರಾಮದ ನಾಸಿರಾ ಬಾನು ಸಿವಿಲ್‌ ನ್ಯಾಯಾ ಧೀಶರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮೆರೆದಿದ್ದಾರೆ.

Advertisement

ಸಿವಿಲ್‌ ನ್ಯಾಯಾಧೀಶ ಹುದ್ದೆಗೆ ನಡೆದ ಎರಡನೇ ಹಂತದ ಪರೀಕ್ಷೆ ಮತ್ತು ಆ ಬಳಿಕ ನಡೆದ ಸಂದರ್ಶನದಲ್ಲಿ ನಾಸಿರಾ ಬಾನು ಆಯ್ಕೆಯಾಗಿದ್ದಾರೆ. ಈ ಹುದ್ದೆಯ ಮೊದಲ ಹಂತದ ಪರೀಕ್ಷೆಯಲ್ಲಿ 2,074 ಅಭ್ಯರ್ಥಿಗಳು ಹಾಜರಾಗಿದ್ದು, 52 ಮಂದಿ ಆಯ್ಕೆಗೊಂಡಿದ್ದರು. ಅವರಲ್ಲಿ 15 ಮಂದಿ ಕೊನೆಯ ಸಂದರ್ಶನಕ್ಕೆ ಪ್ರವೇಶ ಪಡೆದರು. ಅವರಲ್ಲಿ ನಾಸಿರಾ ಬಾನು ಓರ್ವರು.

ಶಿಕ್ಷಣ: ನಾಸಿರಾ ಬಾನು ಅವರು ಇಲ್ಲಿನ ಅಲಿಯಬ್ಬ ಮತ್ತು ನೆಬಿಸಾ
ದಂಪತಿಯ ಪುತ್ರಿ. ಬಜಗೋಳಿ ಸರಕಾರಿ ಶಾಲೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿರುವ ಅವರು ಬಳಿಕ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.

ಕಾರ್ಕಳದ ಕೆ. ವಿಜೇಂದ್ರ ಕುಮಾರ್‌ ಅವರ ಬಳಿ ಸಹಾಯಕ ವಕೀಲರಾಗಿ, ಪ್ರಸ್ತುತ ಜಿ. ಮುರಳೀಧರ ಭಟ್‌ ಅವರ ಬಳಿ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಗಳ ಸಾಧನೆ ಖುಷಿ ತಂದಿದೆ, ನಾವೆಲ್ಲರೂ ಸಂಭ್ರಮದಲ್ಲಿದ್ದೇವೆ. ಮಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಪ್ರೋತ್ಸಾಹ ನೀಡಿದ್ದೆ.
– ಅಲಿಯಬ್ಬ ನಲ್ಲೂರು, ನಾಸಿರಾ ಬಾನು ಅವರ ತಂದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next