Advertisement

ಸುಳ್ಳಿನ ವಿರುದ್ಧ ಕ್ರಮ ಅಗತ್ಯವಿದೆ: ಆಯೋಗ

03:55 AM Jun 30, 2017 | Karthik A |

ಹೊಸದಿಲ್ಲಿ: ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆಯೋಗದ ವಿರುದ್ಧ ಆರೋಪ ಮಾಡುವಂಥ ರಾಜಕೀಯ ಪಕ್ಷಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಲ್ಲಿ ತನಿಖೆ ನಡೆಸಲು ಹೆಚ್ಚಿನ ಅಧಿಕಾರ ನೀಡಬೇಕು ಎಂಬ ತನ್ನ ಮನವಿಯನ್ನು ಚುನಾವಣಾ ಆಯೋಗ ಪುನರುಚ್ಚರಿಸಿದೆ. ಸುಳ್ಳು ಆರೋಪಗಳ ವಿರುದ್ಧ ಆಯೋಗವನ್ನು ರಕ್ಷಿಸಬೇಕೆಂದರೆ ಇಂತಹುದೊಂದು ಅಧಿಕಾರದ ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಹೇಳಿದ್ದಾರೆ.

Advertisement

ನಮ್ಮ ವಿರುದ್ಧ ಸೂಕ್ತ ಪುರಾವೆಗಳಿಲ್ಲದೇ ಕೆಲವು ರಾಜಕೀಯ ಪಕ್ಷಗಳು ಆರೋಪ ಹೊರಿಸುತ್ತವೆ. ಅಂಥವರ ವಿರುದ್ಧ ನಾವು ಮಾನಹಾನಿ ಪ್ರಕರಣ ದಾಖಲಿಸಬಹುದು. ಆದರೆ, ನಾವದನ್ನು ಮಾಡುವುದಿಲ್ಲ. ಏಕೆಂದರೆ, ದೂರುದಾರನಾಗಿ ಕೋರ್ಟ್‌ಗೆ ಹೋಗುವುದು ನಮಗೆ ಇಷ್ಟವಿಲ್ಲ. ಹಾಗಾಗಿ, ನ್ಯಾಯಾಂಗ ನಿಂದನೆ ಆರೋಪದಲ್ಲಿ ವಿಚಾರಣೆ ನಡೆಸುವ ಅಧಿಕಾರವನ್ನು ನಮಗೇ ನೀಡಬೇಕು. ಆಗ ಅಂಥ ರಾಜಕೀಯ ಪಕ್ಷಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ ಜೈದಿ. ಏಪ್ರಿಲ್‌ ತಿಂಗಳಲ್ಲಿ ಈ ಕುರಿತು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದ ಚುನಾವಣಾ ಆಯೋಗ, ಇದಕ್ಕೆ ಸಂಬಂಧಿಸಿದ ಚುನಾವಣಾ ಕಾನೂನಿಗೆ ತಿದ್ದುಪಡಿ ತರುವಂತೆ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next