Advertisement

ನಿಧನದ 1 ವರ್ಷದ ಬಳಿಕ ಬಹುಕೋಟಿ ನಕಲಿ ಛಾಪಾ ಹಗರಣದಲ್ಲಿ ತೆಲಗಿ ಖುಲಾಸೆ

11:07 AM Dec 31, 2018 | Sharanya Alva |

ನಾಸಿಕ್: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೃತಪಟ್ಟಿರುವ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಹಾಗೂ ಇತರರನ್ನು ಮಹಾರಾಷ್ಟ್ರದ ನಾಸಿಕ್ ಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.

Advertisement

ನಕಲಿ ಛಾಪಾ ಕಾಗದದ ಹಲವು ಪ್ರಕರಣಗಳಲ್ಲಿ ತೆಲಗಿಗೆ ಕೋರ್ಟ್ ಒಟ್ಟು 30 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ತೆಲಗಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರು ಜೈಲಿನಲ್ಲಿ ಸಾವನ್ನಪ್ಪಿದ್ದ.

ಮಾಜಿ ಟ್ರಾವೆಲ್ ಏಜೆಂಟ್ ಆಗಿದ್ದ ಕರೀಂ ಲಾಲ್ ತೆಲಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ಸ್ಟ್ಯಾಂಪ್ ಪೇಪರ್ ದಂಧೆ ನಡೆಸುತ್ತಿದ್ದ. ಸುಮಾರು ದಶಕಗಳ ಕಾಲ ಕಳ್ಳ ವ್ಯವಹಾರ ನಡೆಸುತ್ತಿದ್ದ ತೆಲಗಿಯನ್ನು ಕರ್ನಾಟಕ ಪೊಲೀಸರು 2001ರಲ್ಲಿ ಬಂಧಿಸಿದ್ದರು. ಸುಮಾರು 11 ರಾಜ್ಯಗಳಲ್ಲಿ ಹಲವಾರು ಕೇಸ್ ಗಳು ತೆಲಗಿ ವಿರುದ್ಧ ದಾಖಲಾಗಿದ್ದವು. ಸರ್ಕಾರಿ ಅಧಿಕಾರಿಗಳ ಶಾಮೀಲಿನೊಂದಿಗೆ ತೆಲಗಿ ಈ ನಕಲಿ ಛಾಪಾ ಕಾಗದದ ಜಾಲ ನಡೆಸುತ್ತಿದ್ದ. ಈ ಹಗರಣದಲ್ಲಿ ಹಲವಾರು ಉನ್ನತ ಹುದ್ದೆಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳ ಹೆಸರು ಬಯಲಿಗೆ ಬಂದಿತ್ತು. ಸುಮಾರು 18 ರಾಜ್ಯಗಳ 70 ನಗರಗಳಲ್ಲಿ 350 ಏಜೆಂಟರುಗಳ ಮೂಲಕ ತೆಲಗಿ ಈ ಜಾಲ ನಡೆಸುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next