Advertisement

ರಕ್ತ ಪರೀಕ್ಷೆಯಿಂದಲೇ ಸ್ತನ ಕ್ಯಾನ್ಸರ್‌ ಪತ್ತೆ

06:37 PM Nov 21, 2021 | Team Udayavani |

ವಾಷಿಂಗ್ಟನ್‌: ಕೇವಲ ರಕ್ತ ಪರೀಕ್ಷೆ ಮಾತ್ರದಿಂದಲೇ ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಸಂಶೋಧಿಸಿದ ಭಾರತದ ದಾತಾರ್‌ ಕ್ಯಾನ್ಸರ್‌ ಜೆನೆಟಿಕ್ಸ್‌ನ ಸಾಧನೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗ (ಎಫ್ಡಿಎ) ಮಾನ್ಯತೆ ನೀಡಿದೆ. ಜತೆಗೆ ಇದೊಂದು ಅಸಾಮಾನ್ಯ ಸಂಶೋಧನೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದೆ. ದಾತಾರ್‌ ಜೆನೆಟಿಕ್ಸ್‌ ಹೇಳಿಕೊಂಡ ಪ್ರಕಾರ ಶೇ. 99ರಷ್ಟು ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್‌ ಅನ್ನು ಪತ್ತೆಹಚ್ಚಲಾಗುತ್ತದೆ.

Advertisement

ಈ ವ್ಯವಸ್ಥೆಯಿಂದಾಗಿ ಕಾಯಿಲೆಗೆ ಶೀಘ್ರವಾಗಿ ಮತ್ತು ಸೂಕ್ತವಾಗಿ ಔಷಧ ನೀಡಿ ಗುಣಪಡಿಸಲು ಸಾಧ್ಯವಿದೆ. ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವುದರಿಂದ ಚಿಕಿತ್ಸೆಯೂ ಸುಲಭವಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ 20 ಸಾವಿರ ಆರೋಗ್ಯಯುತವಾಗಿರುವ ಮತ್ತು ಕ್ಯಾನ್ಸರ್‌ ಲಕ್ಷಣಗಳು ಇರುವ ಮಹಿಳೆಯರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿತ್ತು. ಕೇವಲ ಐದು ಎಂ.ಎಲ್‌.ರಕ್ತದ ಮೂಲಕ ಪರೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ:ಪ್ರಧಾನಿ ಕ್ಷಮೆ ಯಾಚಿಸಿದರೆ ಸಾಲದು,ಹೊಣೆ ಹೊರಬೇಕು: ಪ್ರಕಾಶ್‌ ರಾಜ್‌

ಹೊಸ ವ್ಯವಸ್ಥೆಯಿಂದಾಗಿ ರೋಗಿಗಳಿಗೆ ರೇಡಿಯೇಷನ್‌ ಅಥವಾ ಮ್ಯಾಮೋಗ್ರಫಿಗೆ ಒಳಗಾಗುವ ಅಗತ್ಯ ಇರುವುದಿಲ್ಲ. ಈ ಬಗ್ಗೆ ಮಾತನಾಡಿದ ದಾತಾರ್‌ ಕ್ಯಾನ್ಸರ್‌ ಜೆನೆಟಿಕ್ಸ್‌ನ ಮುಖ್ಯಸ್ಥ ರಾಜನ್‌ ದಾತಾರ್‌ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಸಂಸ್ಥೆ ಈ ಸಂಶೋಧನೆ ಕೈಗೊಂಡಿದೆ. ಸದ್ಯ ಐರೋಪ್ಯ ಒಕ್ಕೂಟದಲ್ಲಿ ಲಭ್ಯ ಇರುವ ಈ ವ್ಯವಸ್ಥೆ, ದೇಶದಲ್ಲಿ ಕೂಡ ಶೀಘ್ರವೇ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next