Advertisement

ವಯೋಮಿತಿ ವಿವಾದಕ್ಕೆ ಹೆದರಿ ನಸೀಮ್ ಶಾ ಹಿಂದಕ್ಕೆ ಪಡೆದ ಪಾಕ್?

03:56 PM Jan 09, 2020 | keerthan |

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮುಂಬರುವ 19 ವಯೋಮಿತಿ ವಿಶ್ವಕಪ್‌ ಕ್ರಿಕೆಟ್‌ ತಂಡದಿಂದ ನಸೀಮ್‌ ಶಾ ಹೊರಗಿಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ಹತ್ತಾರುಅನುಮಾನಗಳಿಗೆ ಕಾರಣವಾಗಿದೆ.

Advertisement

ನಸೀಮ್‌ ಶಾ ವಯಸ್ಸಿಗೆ ಸಂಬಂಧ ಪಟ್ಟಂತೆ ಮೊದಲೇ ವಿವಾದಗಳು ಆಗಿದ್ದವು. 16 ವರ್ಷದ ಕ್ರಿಕೆಟಿಗ ಶಾ ನೈಜವಾದ ವಯಸ್ಸು ಮುಚ್ಚಿಡಲಾಗಿದೆ ಎನ್ನುವ ದೂರುಗಳೂ ಕೇಳಿ ಬಂದಿದ್ದವು.

ಭಾರತ ಮಾಜಿ ಕ್ರಿಕೆಟಿಗರಾದ ಇರ್ಫಾನ್‌ ಪಠಾಣ್‌ ಸೇರಿದಂತೆ ಹಲವಾರು ಶಾ ವಯಸ್ಸಿನ ದಾಖಲೆ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ ಮತ್ತೂಂದು ವಿವಾದ ಆಗಬಾರದು ಎಂದು ಹೆದರಿ ಪಾಕ್‌ ಕ್ರಿಕೆಟ್‌ ಮಂಡಳಿ ನಸೀಮ್‌ ಶಾ ರನ್ನು ಅಂತಿಮ ಕ್ಷಣದಲ್ಲಿ ಹೊರಗಿಟ್ಟಿದೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ನಸೀಮ್ ಶಾ ಅವರು ಪಾಕಿಸ್ಥಾನ ಹಿರಿಯರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ನಸೀಮ್ ಶಾ ಡೇವಿಡ್ ವಾರ್ನರ್ ಸಹಿತ ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next