ಕರಾಚಿ : ಅಬುಧಾಬಿಯಲ್ಲಿ ಮುಂದಿನ ತಿಂಗಳು ಪುನರಾರಂಭಗೊಳ್ಳಲಿರುವ ಪಾಕಿಸ್ಥಾನ್ ಸೂಪರ್ ಲೀಗ್‌ನಿಂದ (ಪಿಎಸ್‌ಎಲ್) ಪಾಕ್‌ನ ಯುವ ವೇಗಿ ನಸೀಮ್ ಶಾ ಹೊರಬಿದ್ದಿ¨ªಾರೆ. ಕೋವಿಡ್-19 ನಿಯಮನ್ನು ಉಲ್ಲಂ ಸಿದ್ದರಿಂದ ಅವರನ್ನು ಟೂರ್ನಿಯಿಂದ ಕೈಬಿಡಲಾಗಿದೆ.
ಸೋಮವಾರ ಲಾಹೋರ್‌ಗೆ ಬಂದಿಳಿದಿದ್ದ 18ರ ಹರೆಯದ ನಸೀಮ್ ಶಾ ಕೋವಿಡ್-19 ನೆಗೆಟಿವ್ ವರದಿ ಸಲ್ಲಿಸಿದ್ದರು. ಇದು ಅವಧಿ ಮೀರಿದ ನೆಗೆಟಿವ್ ರಿಪೋರ್ಟ್ ಆಗಿತ್ತು. ಹೀಗಾಗಿ ನಸೀಮ್ ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ಪಾಕಿಸ್ಥಾನ್ ಕ್ರಿಕೆಟ್ ಮಂಡಳಿ ಹೇಳಿದೆ. ಕೂಡಲೇ ನಸೀಮ್ ಶಾ ಅವರನ್ನು ಪ್ರತ್ಯೇಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದೂ ತಿಳಿಸಿದೆ.
ಇದನ್ನೂ ಓದಿ :ಸಿಬಿಐ ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ಆಯ್ಕೆ
ಗಾಯಾಳು ಶಾಹಿದ್ ಅಫ್ರಿದಿ ಪಿಎಸ್‌ಎಲ್‌ನಿಂದ ಔಟ್
ಬೆನ್ನು ನೋವಿಗೆ ಸಿಲುಕಿರುವ ಆಲ್‌ರೌಂಡರ್ ಶಾಹಿದ್ ಅಫ್ರಿದಿ “ಪಾಕಿಸ್ಥಾನ್ ಸೂಪರ್ ಲೀಗ್’ನ ಅಬುಧಾಬಿ ಲೆಗ್‌ನಿಂದ ಹೊರಗುಳಿಯಲಿದ್ದಾರೆ.
ಮುಲ್ತಾನ್ ಸುಲ್ತಾನ್ ತಂಡದ ಸ್ಟಾರ್ ಆಟಗಾರನಾಗಿರುವ ಅಫ್ರಿದಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿರುವಾಗ ಈ ಸಮಸ್ಯೆಗೆ ಸಿಲುಕಿದರು. ವೈದ್ಯರ ಸಲಹೆಯಂತೆ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಶಾಹಿದ್ ಅಫ್ರಿದಿ ಬದಲು ಎಡಗೈ ಸ್ಪಿನ್ನರ್ ಆಸಿಫ್ ಅಫ್ರಿದಿ ಅವರನ್ನು ಸೇರಿಸಿಕೊಳ್ಳಲಾಗಿದೆ.