Advertisement

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

10:13 PM Dec 07, 2021 | Team Udayavani |

ನ್ಯೂಯಾರ್ಕ್‌: ನಾಸಾ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್‌ಎಸ್‌)ದಲ್ಲಿ ಎರಡನೇ ಹಂತದ ಹಸಿಮೆಣಸಿನಕಾಯಿಯನ್ನು ಬೆಳೆದಿದ್ದಾರೆ.

Advertisement

ಈ ಹಿಂದೆ ಅ.29ರಂದು ಮೊದಲ ಬಾರಿಗೆ ಐಎಸ್‌ಎಸ್‌ನಲ್ಲಿ ಮೆಣಸು ಬೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪ್ಲ್ರಾಂಟ್‌ ಹ್ಯಾಬಿಟೆಟ್‌-04 ಎಂಬ ಪ್ರಯೋಗದ ಭಾಗವಾಗಿ ಐಎಸ್‌ಎಸ್‌ನಲ್ಲೇ ಕೃತಕ ಸುಧಾರಿತ ಸಸ್ಯ ಆವಾಸಸ್ಥಾನವನ್ನು ಸಿದ್ಧಪಡಿಸಿ, ಮೆಣಸನ್ನು ಬೆಳೆಸಲಾಗಿತ್ತು.

137 ದಿನಗಳು ತುಂಬಿದಾಗ ಮೆಣಸಿನಕಾಯಿ ಹಸನಾಗಿ ಬೆಳೆದಿತ್ತು. ಮೆಣಸಿನಲ್ಲಿ ಅತಿ ಹೆಚ್ಚು ವಿಟಮಿನ್‌-ಸಿ ಇದ್ದು, ಖಾರವೂ ಹೆಚ್ಚಿರುತ್ತದೆ.

ಹೀಗಾಗಿ, ದೀರ್ಘ‌ಕಾಲ ಐಎಸ್‌ಎಸ್‌ನಲ್ಲಿ ಉಳಿಯುವ ಗಗನಯಾತ್ರಿಗಳ ವಾಸನೆ ಮತ್ತು ರುಚಿ ಗ್ರಹಿಕೆಯನ್ನು ಸ್ಥಿರವಾಗಿಡಲು ಇದು ನೆರವಾಗುತ್ತದೆ ಎಂದು ಪಿಎಚ್‌-04 ಸಂಶೋಧಕ ಮ್ಯಾಟ್‌ ರೋಮಿನ್‌ ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next