ಪ್ಯಾರಿಸ್: ಕೇವಲ ಶೀತಪ್ರದೇಶ, ಶಾಶ್ವತ ಛಾಯಾಪ್ರದೇಶ ಮಾತ್ರವೇ ಅಲ್ಲ; ಸೂರ್ಯನ ಬೆಳಕು ಬೀಳುವ ಚಂದ್ರನ ಎಲ್ಲ ಮೇಲ್ಮೈನಲ್ಲೂ ನೀರಿನ ಕಣಗಳಿವೆ. ಆದರೆ ಇವು ಹೈಡ್ರಾಕ್ಸಿಲ್ ರಚನೆಯಲ್ಲಿವೆ ಎಂದು ನಾಸಾ ದೃಢೀಕರಿಸಿದೆ. “ಸೋಫಿಯಾ’ ಟೆಲಿಸ್ಕೋಪ್ ಮೂಲಕ ನಾಸಾ ವಿಜ್ಞಾನಿಗಳು ಇದನ್ನು ಪತ್ತೆಹಚ್ಚಿದ್ದು, ಈ ಕುರಿತಾದ 2 ವರದಿಗಳನ್ನು “ನೇಚರ್ ಆಸ್ಟ್ರಾನಮಿ’ ಪತ್ರಿಕೆ ಪ್ರಕಟಿಸಿದೆ.
ನೀರಿನ ಕಣ ಹೇಗಿದೆ?: ಚಂದ್ರನ ಮಣ್ಣಿನಲ್ಲಿ ಟೆಲಿಸ್ಕೋಪ್ ಪತ್ತೆಹಚ್ಚಿದ ನೀರಿನ ಕಣ ಅತ್ಯಂತ ಚಿಕ್ಕದು. ಆದರೆ, ಇದರ ಗಾತ್ರ ಸಹರಾ ಮರುಭೂಮಿಯ ಜಲಕಣಕ್ಕಿಂತ ಕೇವಲ 100 ಪಟ್ಟು ದೊಡ್ಡದು ಎಂದು ನಾಸಾ ತಿಳಿಸಿದೆ.
ಸೂರ್ಯನ ತಾಪದ ರಾಸಾಯನಿಕ ಪರಿಣಾಮ ಗಳಿಂದ ಜಲ ಕಣ ಉದ್ಭವಿಸಿದೆ. ಸೌರ ಮಾರುತಗಳು ಚಂದ್ರನ ಭೂಪ್ರ ದೇಶದ ಮೇಲೆ ಬೀಸಿದಾಗ, ಅವು ಆಮ್ಲ ಜನಕ ಮತ್ತು ಮಣ್ಣಿನಲ್ಲಿರುವ ಖನಿಜಗಳೊಂದಿಗೆ ಬೆರೆತಿದ್ದು, ಈ ವೇಳೆ ಹೈಡ್ರಾಕ್ಸಿಲ್ ರಚನೆಗೊಂಡಿದೆ. ಹೈಡ್ರಾಕ್ಸಿಲ್ ಅನ್ನು ಕ್ರಮೇಣ ಜಲವಾಗಿ ಪರಿವರ್ತಿಸಬಹುದು ಎಂದು ನಾಸಾ ಹೇಳಿದೆ.
ಪತ್ತೆ ಹಚ್ಚಿದ್ದು ಹೇಗೆ?
ನಾಸಾ ಮತ್ತು ಜರ್ಮನಿ ಬಾಹ್ಯಾಕಾಶ ಕೇಂದ್ರ ಜಂಟಿಯಾಗಿ “ಸೋಫಿಯಾ’ ಟೆಲಿ ಸ್ಕೋಪ್ ಅಳವಡಿಸಿವೆ. ಬೋಯಿಂಗ್ 747-ಎಸ್‌ಪಿ ನೌಕೆ ಆಧಾರಿತ ವಿಶ್ವದ ಅತೀ ದೊಡ್ಡ ಹಾರುವ ಟೆಲಿಸ್ಕೋಪ್ ಇದಾ ಗಿದ್ದು, 2.5 ಎಂ ಮಸೂರ ಹೊಂದಿದೆ. ಚಂದ್ರನ ಮೇಲ್ಮೆ„ಯಿಂದ 45 ಸಾವಿರ ಅಡಿ ಎತ್ತರದಿಂದ ಸೋಫಿಯಾ ಸಂಶೋ ಧನೆ ನಡೆಸಿತ್ತು. ಭೂಮಿಗೆ ಕಾಣುವ ಚಂದ್ರನ ದಕ್ಷಿಣಾರ್ಧ ಗೋಳ “ಕ್ಲೇವಿಯಸ್’ ಪದರದಲ್ಲಿ ಜಲಕಣಗಳು ಪತ್ತೆಯಾಗಿವೆ.