Advertisement

ಶುಕ್ರವಾರ ಮಂಗಳನ ಅಂಗಳಕ್ಕಿಳಿಯಲಿದೆ ನಾಸಾ’ದ ರೋವರ್ ಮಿಷನ್..!

02:54 PM Feb 17, 2021 | Shreeraj Acharya |

ನವ ದೆಹಲಿ : ನಾಸಾ(NASA) ಬಾಹ್ಯಾಕಾಶ ಸಂಸ್ಥೆ ಕೈಗೊಂಡ ಅತ್ಯಂತ ಮಹತ್ವಾಕಾಂಕ್ಷೆಯ ಮಾರ್ಸ್ ರೋವರ್ ಮಿಷನ್, ಭಾರತದ ಕಾಲಮಾನದ ಪ್ರಕಾರ ಶುಕ್ರವಾರ (ಫೆ. 19) ಮಂಗಳ ಗ್ರಹದ ಮೇಲ್ಮೈಗೆ ಇಳಿಯಲಿದೆ.

Advertisement

ಈ ಬೇಸಿಗೆಯಲ್ಲಿ ಉಡಾವಣೆಯಾದ ರೋವರ್ ಮಂಗಳದ ಮೇಲ್ಮೈಯಲ್ಲಿರುವ ಪ್ರಾಚೀನ ಡೆಲ್ಟಾದ ಜೆಜೆರೊ ಕ್ರೇಟರ್ನಲ್ಲಿ ಶುಕ್ರವಾರ ಮುಂಜಾನೆ 2:25 ಕ್ಕೆ ಸ್ಪರ್ಶಿಸಲಿದೆ ಎಂದು ನಾಸಾ ದೃಢಪಡಿಸಿದೆ.

ಓದಿ : ಸುದ್ದಿ ಮಾಡುತ್ತಿದೆ ವಾಯ್ಸ್ ಚಾಟ್ ಆ್ಯಪ್ Clubhouse…!

ರೋವರ್ ಮಂಗಳದ ಭೂಪ್ರದೇಶದಲ್ಲಿ ಹಲವಾರು ತನಿಖೆಗಳನ್ನು ನಡೆಸಲಿದ್ದು,  MOXIE (Mars Oxygen In-Situ Resource Utilization Experiment) ಎಂಬ ಉಪಕರಣವನ್ನು ಸಹ ಹೊತ್ತೊಯ್ಯುತ್ತದೆ, ಇದು ಗ್ರಹದಲ್ಲಿ ಆಮ್ಲಜನಕವನ್ನು ಉತ್ಪಾದಿಸುತ್ತದೆ.

Advertisement

ಈ  ಹಿಂದೆ ಮಂಗಳ ಗ್ರಹದಲ್ಲಿ ಜೀವಿಗಳ ವಾಸ ಇದ್ದಿತ್ತೇ ಎಂಬುವುದರ ಬಗ್ಗೆ  ತಿಳಿಯಲು ವೈಜ್ಞಾನಿಕವಾಗಿ ಕೇಂದ್ರೀಕರಿಸಲಾಗಿತ್ತು ”ಎಂದು ವಾಷಿಂಗ್ಟನ್‌ ನ ನಾಸಾ ಪ್ರಧಾನ ಕಚೇರಿಯಲ್ಲಿರುವ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.

ಮಂಗಳ ಗ್ರಹದ ಮೇಲಿನ ಖಗೋಳವಿಜ್ಞಾನ ಸೇರಿದಂತೆ ಏನ್ಶಿಯಂಟ್ ಸೂಕ್ಷ್ಮಜೀವಿಗಳ ವಾಸದ ಗುರುತುಗಳ ಹುಡುಕಾಟ ಇದರ ಪ್ರಮುಖ ಉದ್ದೇಶವಾಗಿದೆ ಎಂದು ನಾಸಾ ತಿಳಿಸಿದೆ.

ಓದಿ : ನನ್ನ ಸಾಂವಿಧಾನಿಕ ನೈತಿಕ ಜವಾಬ್ದಾರಿ ಪವಿತ್ರ ಕರ್ತವ್ಯ : ಕಿರಣ್ ಬೇಡಿ

 

Advertisement

Udayavani is now on Telegram. Click here to join our channel and stay updated with the latest news.

Next