Advertisement

ಆದಿತ್ಯನ ಅಂತರಂಗ ಬಹಿರಂಗ! ; ನಾಸಾದ ಆಕಾಶಕಾಯ ಪಾರ್ಕರ್‌ನಿಂದ ಮಾಹಿತಿ

10:04 AM Dec 07, 2019 | Team Udayavani |

ವಾಷಿಂಗ್ಟನ್‌: ಸೂರ್ಯನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿದ್ದ ‘ಪಾರ್ಕರ್‌’, ಮಾನವ ನಿರ್ಮಿತ ಯಾವುದೇ ಆಕಾಶಕಾಯ ಈವರೆಗೆ ತಲುಪದಿರುವ ಸೂರ್ಯನ ಸಮೀಪಕ್ಕೆ ತಲುಪಿದೆ. ಅಷ್ಟು ಹತ್ತಿರದಿಂದ ಅಮೂಲ್ಯ ಮಾಹಿತಿಗಳನ್ನು ರವಾನಿಸಿರುವ ಆ ಆಕಾಶಕಾಯ, ಸೂರ್ಯನ ವಾತಾವರಣ, ಅಲ್ಲಿನ ಅಗಾಧ ಉಷ್ಣಾಂಶ, ಸೋಲಾರ್‌ ವಿಂಡ್‌ ಮತ್ತಿತರ ಮಾಹಿತಿಗಳುಳ್ಳ ಅನೇಕ ದತ್ತಾಂಶಗಳನ್ನು ನಾಸಾಕ್ಕೆ ರವಾನಿಸಿದೆ.

Advertisement

ಇದು ವಿಜ್ಞಾನಿಗಳಿಗೆ ಖುಷಿ ತಂದಿದ್ದು, ಸೂರ್ಯನ ಬಗ್ಗೆ ಶತಮಾನಗಳಿಂದ ಇರುವ ಕೆಲವು ಮೂಲಭೂತ ಪ್ರಶ್ನೆಗಳಿಗೆ ಪಾರ್ಕರ್‌ ಕಳುಹಿಸಿರುವ ದತ್ತಾಂಶಗಳು ಉತ್ತರ ನೀಡುತ್ತವೆ ಎಂದು ಹೇಳಿದ್ದಾರೆ.

ನೇಚರ್‌ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಮಾಹಿತಿಯಂತೆ, ಪಾರ್ಕರ್‌ ಕಳುಹಿಸಿರುವ ದತ್ತಾಂಶಗಳು ಸೂರ್ಯನ ಮೇಲ್ಮೈಯಾದ ಕರೋನಾದಲ್ಲಿ ಸೂರ್ಯನ ಒಡಲಿನಲ್ಲಿನ ಉಷ್ಣಾಂಶಕ್ಕಿಂತ ನೂರಾರು ಪಟ್ಟು ಹೆಚ್ಚು ಏಕೆ, ಸೂರ್ಯನ ಮೇಲ್ಮೈ ಮೇಲೆ ಉಂಟಾಗುವ ‘ಸೋಲಾರ್‌ ವಿಂಡ್‌’ ಗಳ ಹಿಂದಿನ ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ಅವುಗಳ ವಿಶ್ಲೇಷಣೆಯಿಂದ ಸೂರ್ಯನ ಮೇಲ್ಮೈ ಮೇಲಿನ ಕಣಗಳ ವೇಗ, ಅವುಗಳ ರಚನೆ ಮುಂತಾದ ವಿಚಾರಗಳ ಬಗ್ಗೆ ಖಚಿತ ಉತ್ತರ ಸಿಗಲಿದೆ ಎಂದು ಹೇಳಲಾಗಿದೆ. ಈ ಆಕಾಶಕಾಯವನ್ನು 2018ರ ಆಗಸ್ಟ್‌ನಲ್ಲಿ ಸೂರ್ಯನಲ್ಲಿಗೆ ಕಳುಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next