Advertisement

ಮಾರುತಕ್ಕೆ ರೋವರ್‌ ಬಲಿ? ಸಂಪರ್ಕ ಕಡಿದುಕೊಂಡ ಮಂಗಳದಲ್ಲಿರುವ ನೌಕೆ

10:15 AM Aug 30, 2018 | Team Udayavani |

ವಾಷಿಂಗ್ಟನ್‌: ಮಂಗಳದ ನೆಲದಲ್ಲಿ ಓಡಾಡುತ್ತಾ ಗ್ರಹದ ಸಂಶೋಧನೆ ನಡೆಸುತ್ತಿದ್ದ ನಾಸಾದ ಆಪರ್ಚುನಿಟಿ ರೋವರ್‌ ಅಲ್ಲಿನ ಭಾರೀ ಚಂಡಮಾರುತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

Advertisement

15 ವರ್ಷಗಳ ಹಿಂದೆ, 2003ರ ಜೂನ್‌ನಲ್ಲಿ ಗಾಲ್ಫ್ ಕಾರ್ಟ್‌ ಗಾತ್ರದ ರೋಬೋ ಆಪರ್ಚುನಿಟಿಯನ್ನು ನಾಸಾ ಉಡಾಯಿಸಿತ್ತು. 2004ರ ಜನವರಿಯಲ್ಲಿ ಅದು ಮಂಗಳದಲ್ಲಿ ಇಳಿದಿತ್ತು. ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಮಂಗಳ ಗ್ರಹದ ಮೇಲ್ಮೆ„ನಲ್ಲಿ ಓಡಾಡುತ್ತಾ ಈ ರೋಬೋ ನಾಸಾಕ್ಕೆ ಮಾಹಿತಿ ರವಾನಿಸುತ್ತಿತ್ತು.  

 ಎರಡು ತಿಂಗಳ ಹಿಂದೆ ಬೀಸಿದ ಧೂಳಿನ ಚಂಡಮಾರುತದಿಂದಾಗಿ ಈ ರೋವರ್‌ ಕೆಟ್ಟು ಹೋಗಿರುವ ಸಾಧ್ಯತೆಯಿದೆ. ಜೂ.10ರ ಅನಂತರ ಆಪರ್ಚುನಿಟಿ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ. ಎರಡು ವರ್ಷಗಳಿ ಗೊಮ್ಮೆ ಧೂಳಿನ ಚಂಡಮಾರುತ ಮಂಗಳ ಗ್ರಹದಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಈ ಬಾರಿ ಹಿಂದೆಂದೂ ಆಗಿರದಷ್ಟು ತೀವ್ರ ಸ್ವರೂಪದಲ್ಲಿತ್ತು. ನಾವು ರೋವರ್‌ನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿಜ್ಞಾನಿ ಸ್ಟೀವ್‌ ಸ್ಕ್ವೇರೆಸ್‌ ಹೇಳಿದ್ದಾರೆ.

ಮಂಗಳದಲ್ಲಿನ ತಾಪಮಾನ -100 ಡಿಗ್ರಿ ಫ್ಯಾ. ತನಕ ಹೋಗುತ್ತದೆ. ಕಡಿಮೆ ತಾಪಮಾನದಲ್ಲಿ ಎಲೆಕ್ಟ್ರಿಕ್‌ ಸರ್ಕ್ನೂಟ್‌ನಲ್ಲಿನ ಲೋಹಗಳು ಸಂಕುಚಿತಗೊಳ್ಳುತ್ತವೆ. ಆದರೆ ಚಂಡಮಾರುತದಿಂದಾಗಿ ರೋವರ್‌ನ ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿ ಸುತ್ತಿರಬಹುದು, ಇದರಿಂದಾಗಿ ರೋವರ್‌ ಹಾನಿಗೀಡಾಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next