Advertisement
ಲಾಸ್‌ಏಂಜಲೀಸ್ ಸಮೀಪದ ಪಸಾಡೆನಾ ಪ್ರಾಂತ್ಯದಲ್ಲಿರುವ ಜೆಟ್ ಪ್ರೊಪಲನ್ ಲ್ಯಾಬೊ ರೇಟರಿಯಲ್ಲಿ ಈ ರೋವರ್ ಅನ್ನು ತಯಾರಿಸಲಾಗಿದ್ದು, ಕಳೆದ ವಾರ ಅದರ ಸಂಚಲನೆಯನ್ನು ಪರೀಕ್ಷಿಸಲಾಗಿದೆ. ಪತ್ರಕರ್ತರಿಗೆ ಈ ರೋವರನ್ನು ತೋರಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ನಾಸಾ ವಿಜ್ಞಾನಿಗಳು, ವಿಭಿನ್ನ ಉದ್ದೇಶದೊಂದಿಗೆ ಮಂಗಳನಲ್ಲಿ ಕಾಲಿಡ ಲಿರುವ ಈ ಬಾಹ್ಯಾಕಾಶನೌಕೆಯು ಭವಿಷ್ಯದಲ್ಲಿ ಮನುಷ್ಯನ ಹಲವಾರು ಸಾಹಸಗಳಿಗೆ ನಾಂದಿ ಹಾಡಲಿದೆ ಎಂಬ ಆಶಯ ವಕ್ತಪಡಿಸಿದರು.
ಲಾಸ್‌ಏಂಜಲೀಸ್ ಬಳಿಯ ಲ್ಯಾಬ್‌ನಲ್ಲಿ ಯಶಸ್ವಿ ಪರೀಕ್ಷೆ
ಮಂಗಳನಲ್ಲಿ ಮಾನವನ ಜೀವನಕ್ಕೆ ಇರಬಹುದಾದ ಅನುಕೂಲತೆಗಳ ಬಗ್ಗೆ ಪರೀಕ್ಷಿಸಲಿರುವ ರೋವರ್
ಕೆಂಪುಗ್ರಹದಲ್ಲಿ ಈ ಹಿಂದೆ ಜೀವಿಗಳಿದ್ದ ಬಗ್ಗೆಯೂ ಪರೀಕ್ಷೆ