Advertisement

ನಾಸಾ ಎಲೆಕ್ಟ್ರಿಕ್‌ ವಿಮಾನ ಎಕ್ಸ್‌-57 ಶೀಘ್ರ ಹಾರಾಟ ಆರಂಭ

09:00 PM Feb 02, 2023 | Team Udayavani |

ಕ್ಯಾಂಬ್ರಿಡ್ಜ್: ಎಲೆಕ್ಟ್ರಿಕ್‌ ಸ್ಕೂಟರ್‌, ಬೈಕ್‌, ಕಾರು ಮತ್ತು ಬಸ್‌ ಈಗಾಗಲೇ ರಸ್ತೆಗೆ ಇಳಿದಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಎಲೆಕ್ಟ್ರಿಕ್‌ ವಿಮಾನ ಹಾರಾಟ ಆರಂಭಿಸಲು ಅಣಿಯಾಗುತ್ತಿದೆ. ಅಂದುಕೊಂಡಂತೆ ಆದರೆ ಈ ವರ್ಷವೇ ನಾಸಾ ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಎಲೆಕ್ಟ್ರಿಕ್‌ ವಿಮಾನ ಎಕ್ಸ್‌-57 ತನ್ನ ಮೊದಲ ಹಾರಾಟ ಮಾಡಲಿದೆ.

Advertisement

ವಿಮಾನದ ರೆಕ್ಕೆಗಳ ಉದ್ದಕ್ಕೂ ಪ್ರಭಾವಶಾಲಿ 14 ಪ್ರೊಪೆಲ್ಲರ್‌ಗಳನ್ನು ಎಕ್ಸ್‌-57 ಹೊಂದಿದೆ ಮತ್ತು ಸಂಪೂರ್ಣವಾಗಿ ವಿದ್ಯುತ್‌ನಿಂದ ಚಾಲಿತವಾಗಿದೆ. ವೈಮಾನಿಕ ಇಂಧನಕ್ಕೆ ಪರ್ಯಾಯವಾಗಿ ಬದಲಿ ಇಂಧನದ ಆವಿಷ್ಕಾರವು ಅನೇಕ ವರ್ಷಗಳಿಂದ ನಡೆಯುತ್ತಿದೆ.

ಅಮೆರಿಕದ ನಾಸಾ ವಿಜ್ಞಾನಿಗಳು ಬ್ಯಾಟರಿ ಚಾಲಿತ ವಿಮಾನ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಾಲ್ಕು ಸೀಟರ್‌ಗಳ ಎಕ್ಸ್‌-57 ವಿಮಾನವು ತನ್ನ ಪ್ರೊಪೆಲ್ಲರ್‌ಗಳಿಗೆ ವಿದ್ಯುತ್‌ ಮೋಟರ್‌ಗಳನ್ನು ಚಲಾಯಿಸಲು ಲಿಥಿಯಂ ಬ್ಯಾಟರಿಗಳನ್ನು ಬಳಸುತ್ತದೆ. ಆದರೆ ಇದು ಪ್ರಸ್ತುತ ಬಳಸುತ್ತಿರುವ ವೈಮಾನಿಕ ಇಂಧನಕ್ಕೆ ಹೋಲಿಸಿದರೆ 50 ಪಟ್ಟು ಕಡಿಮೆ ಇಂಧನವು ಬ್ಯಾಟರಿಗಳಿಂದ ಉತ್ಪತ್ತಿಯಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next