Advertisement
ಇದರಲ್ಲಿ ಮೊದಲು ಶುಕ್ರಗ್ರಹದತ್ತ ತೆರಳಲಿರುವ ಡಾವಿನ್ಸಿ (ಡೀಪ್ ಅಟ್ಮಾಸ್ಪಿಯರ್ ಆಫ್ ವೀನಸ್ ಇನ್ವೆಸ್ಟಿಗೇಷನ್ ಆಫ್ ನೋಬಲ್ ಗ್ಯಾಸಸ್) ಎಂಬ ಆಕಾಶಕಾಯವು ಬುಧನಲ್ಲಿರುವ ರಾಸಾಯನಿಕಗಳ ಮಾಹಿತಿಯನ್ನು ಸಂಗ್ರಹಿಸಿ, ಭೂಮಿಗೆ ರವಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಗಳು ಅತ್ಯಂತ ಮಹತ್ವ ಹಾಗೂ ವಿಶೇಷವಾಗಿವೆ ಎಂದಿರುವ ಯು.ಕೆ.ಯ ನಾಟಿಂಗ್‌ಹ್ಯಾಮ್ ಟ್ರೆಂಟ್ ವಿವಿಯ ಭೌತಶಾಸ್ತ್ರ ಉಪನ್ಯಾಸಕ ಇಯಾನ್ ವ್ಹಿಟೇಕರ್, ಈ ಕುರಿತಂತೆ ವಿವರಣೆ ನೀಡಿದ್ದಾರೆ. 1990ರ ನಂತರ ಶುಕ್ರಗ್ರಹದ ಅಧ್ಯಯನ ಮಾಡಲಾಗಿಲ್ಲ. ಇಂಥ ದೈತ್ಯ ಪ್ರಯತ್ನವೊಂದಕ್ಕೆ ನಾಸಾ ಮುಂದಡಿಯಿಟ್ಟಿರುವುದು ಮಹತ್ವದ ವಿಚಾರ ಎಂದು ತಿಳಿಸಿದ್ದಾರೆ.
ಇನ್ನು, ಶುಕ್ರಗ್ರಹದ ವಾತಾವರಣ ಭಾರೀ ಭಯಂಕರ. ಅದೊಂದು ಪ್ರತಿಕೂಲ ಜಗತ್ತು. ಅಲ್ಲಿನ ವಾತಾವರಣವು ಗಂಧಕಾಮ್ಲದಿಂದ ಕೂಡಿದೆ. ಅಲ್ಲಿನ ಉಷ್ಣಾಂಶ ಸೀಸವನ್ನೂ ಕರಗಿಸುವಂಥದ್ದು! ಅಂದರೆ, 325 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು. ಇನ್ನು ಅಲ್ಲಿನ ಗಾಳಿಯಲ್ಲಿ ಶೇ. 96ರಷ್ಟು ಭಾಗ ಇಂಗಾಲದಿಂದ ಕೂಡಿದೆ. ಇದರಿಂದ ಅಲ್ಲಿ ಗರಿಷ್ಠ ತಾಪಮಾನ ಒಮ್ಮೊಮ್ಮೆ 470 ಡಿಗ್ರಿ ಸೆಲ್ಸಿಯಸ್‌ನಿಂದ 900 ಡಿಗ್ರಿ ಸೆಲ್ಸಿಯಸ್‌ವರೆಗೆ ಏರುತ್ತದೆ. ಹಾಗಾಗಿಯೇ, ಈ ಗ್ರಹದ ಅಧ್ಯಯನ ಕುತೂಹಲಕಾರಿಯಾಗಿದೆ ಎನ್ನುತ್ತಾರೆ ಇಯಾನ್.