Advertisement

ಕಡೇ ಕ್ಷಣದಲ್ಲಿ ಸೂರ್ಯಶಿಕಾರಿ ಮುಂದಕ್ಕೆ

06:00 AM Aug 12, 2018 | Team Udayavani |

ಕೇಪ್‌ ಕಾರ್ನಿವಾಲ್‌: ಸೂರ್ಯನ ಸಮೀಪಕ್ಕೆ ಗುರಿ ಇಟ್ಟು ಉಡಾವಣೆಗೊಳ್ಳಲು ಒಂದೂವರೆ ನಿಮಿಷ ಇದೆ ಎನ್ನುವಾಗ ಕೇಪ್‌ ಕಾರ್ನಿವಾಲ್‌ ಉಡಾವಣಾ ಕೇಂದ್ರದಲ್ಲಿ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆ ಸ್ತಬ್ಧ ಗೊಂಡಿದೆ. ಒಂದು ನಿಮಿಷ ವಿಳಂಬ ಮಾಡಿ ಉಡಾವಣೆಗೆ ಯತ್ನಿಸಲಾಯಿತಾದರೂ ಬಳಿಕ  ಮುಂದೂಡಲಾಗಿದೆ. ಹೀಲಿಯಂ ಸಿಸ್ಟಮ್‌ನಲ್ಲಿರುವ ಅನಿಲದ ರೆಡ್‌ ಪ್ರಷರ್‌ ಅಲಾರಂ ಕೆಲಸ ಮಾಡದ್ದು ಕಾರಣ ಎಂದು ನಾಸಾ ಹೇಳಿದೆ.

Advertisement

ಇದೇ ಮೊದಲ ಬಾರಿಗೆ ಸೂರ್ಯನ ಪ್ರಭಾ ವಲಯವನ್ನು ಮುಟ್ಟಲಿರುವ ಈ ನೌಕೆ ಅತ್ಯಂತ ಮಹತ್ವದ್ದಾಗಿದೆ. 60 ವರ್ಷಗಳ ಹಿಂದೆ ಸೌರ ಕಾಂತ ವಲಯದ ಅಸ್ತಿತ್ವವನ್ನು ಸಾರಿದ್ದ ಯೂಜಿನ್‌ ಪಾರ್ಕರ್‌ ಕೂಡ ಉಡಾವಣೆ ವೀಕ್ಷಿಸಲು ಆಗಮಿಸಿದ್ದರು. 91 ವರ್ಷ ವಯಸ್ಸಿನ ಯೂಜಿನ್‌ ಪಾರ್ಕರ್‌ ಗೌರವಾರ್ಥ ನೌಕೆಗೆ ಪಾರ್ಕರ್‌ ಎಂದು ಹೆಸರಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next