Advertisement

NASA: ನಾಸಾಗೆ ಮುಚ್ಚಳದ ತಲೆನೋವು!

11:10 PM Oct 24, 2023 | Team Udayavani |

ವಾಷಿಂಗ್ಟನ್‌: ಇತ್ತೀಚೆಗೆ ಅತೀದೊಡ್ಡ ಕ್ಷುದ್ರಗ್ರಹವಾದ “ಬೆನ್ನು”ವಿನಿಂದ ಧೂಳು ಮತ್ತು ಶಿಲೆಗಳ ಮಾದರಿಗಳನ್ನು ಸಂಗ್ರಹಿಸಿದ್ದ ನಾಸಾಗೆ ಈಗ ದೊಡ್ಡ ತಲೆನೋವು ಆರಂಭವಾಗಿದೆ. ಅದೇನೆಂದರೆ ಭೂಮಿಗೆ ಮರಳಿದ್ದ ಓಸಿರಿಸ್‌-ರೆಕ್ಸ್‌ ಯೋಜನೆಯ ನೌಕೆಯು ಸಂಗ್ರಹಿಸಿ ತಂದಿದ್ದ ಸ್ಯಾಂಪಲ್‌ಗ‌ಳುಳ್ಳ ಪೆಟ್ಟಿಗೆಯನ್ನು ತೆರೆಯಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲವಂತೆ! ಹೌದು ಈ ಕಂಟೈನರ್‌ನ ಮುಚ್ಚಳ ತೆಗೆಯಲು ಎಷ್ಟೇ ಪ್ರಯತ್ನ ನಡೆಸಿದರೂ ಆಗುತ್ತಿಲ್ಲ.

Advertisement

ಕಂಟೈನರ್‌ನ ಮುಚ್ಚಳದಲ್ಲಿ 35 ನಟ್ಟು-ಬೋಲ್ಟ್‌ಗಳಿದ್ದು, ಆ ಪೈಕಿ ಎರಡನ್ನು ಸದ್ಯ ಇರುವ ಟೂಲ್‌ಗ‌ಳಿಂದ ತೆಗೆಯಲು ಆಗುತ್ತಿಲ್ಲ ಎಂದು ನಾಸಾ ಹೇಳಿದೆ. ಹೀಗಾಗಿ ಕ್ಷುದ್ರಗ್ರಹದಲ್ಲಿನ ಸ್ಯಾಂಪಲ್‌ಗ‌ಳಿಗೆ ಯಾವುದೇ ಹಾನಿಯಾಗ­ದಂತೆ ಮುಚ್ಚಳ ತೆಗೆಯುವ ಪರ್ಯಾಯ ವಿಧಾನಗಳಿಗಾಗಿ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next