Advertisement

ಬಾಹ್ಯಾಕಾಶ ನಿಲ್ದಾಣದಲ್ಲಿ ಮೆಣಸಿನ “ಕ್ರಾಂತಿ’!

01:35 AM Nov 02, 2021 | Team Udayavani |

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌)ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು, ಮೆಣಸಿನಕಾಯಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ!

Advertisement

ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ಇರುವ ವಿಜ್ಞಾನಿಗಳ ಆಹಾರಕ್ಕಾಗಿ ಅಲ್ಲಿನ ಪರಿಸರದಲ್ಲೇ ಭೂಮಿಯಲ್ಲಿ ಬೆಳೆಯುವಂಥ ತರಕಾರಿಗಳನ್ನು ಹಣ್ಣುಗಳನ್ನು ಬೆಳೆಸುವಂಥ ವಿಶೇಷ ಪ್ರಯೋಗಕ್ಕೆ ನಾಸಾ ಕೆಲ ವರ್ಷಗಳ ಹಿಂದೆಯೇ ಮುಂದಾಗಿತ್ತು. ತನ್ನೀ ಕನಸಿನ ಯೋಜನೆಗೆ “ಪ್ಲಾಂಟ್‌ ಹ್ಯಾಬಿಟಟ್‌’ ಎಂದು ಹೆಸರಿಟ್ಟಿತ್ತು.

ಇದಕ್ಕಾಗಿ, ಬಾಹ್ಯಾಕಾಶ ನಿಲ್ದಾಣದಲ್ಲಿ “ಗ್ರೋತ್‌ ಚೇಂಬರ್‌’ ಎಂಬ ಕೃತಕ ಗುರುತ್ವಾಕರ್ಷಣೆಯುಳ್ಳ, ಸಮಶೀತೋಷ್ಣ ವಲಯವನ್ನು ನಿರ್ಮಿಸಲಾಗಿದೆ. ಅಲ್ಲಿ, ಭೂಮಿಯಿಂದ ಕೊಂಡೊಯ್ಯಲಾಗಿರುವ ಮಣ್ಣು, ಸಾವಯವ ಗೊಬ್ಬರಗಳನ್ನು ಬಳಸಲಾಗುತ್ತಿದೆ. ಈ ಯೋಜನೆಯನ್ನು ಈಗಾಗಲೇ 3 ಹಂತಗಳಲ್ಲಿ ಜಾರಿಗೊಳಿಸಲಾಗಿದ್ದು, ಮೆಣಸನ್ನು ಬೆಳೆಯುವ ನಾಲ್ಕನೇ ಹಂತದ ಯೋಜನೆಯನ್ನು ನಾಲ್ಕು ತಿಂಗಳ ಹಿಂದೆ ಅನುಷ್ಠಾನಗೊಳಿಸಲಾಗಿದೆ.

ಇದನ್ನೂ ಓದಿ:ಪದವಿ ಬಿಟ್ಟು ದಿನಸಿ ವ್ಯಾಪಾರ ಆರಂಭ!

“ಪ್ಲಾಂಟ್‌ ಹ್ಯಾಬಿಟಟ್‌-4′ ಯೋಜನೆಯಡಿ, ಐಎಸ್‌ಎಸ್‌ನಲ್ಲಿರುವ ವಿಜ್ಞಾನಿಗಳು, ಅಲ್ಲಿನ ಮೆಣಸಿನ ಸಸಿಗಳ ಬೀಜಗಳನ್ನು ಬಿತ್ತಿದ್ದರು.  ಸಸಿಗಳಾಗಿ ಬೆಳೆಯುತ್ತಿದ್ದ ಅವನ್ನು ಕಾಳಜಿಯಿಂದ ಪೋಷಿಸುವ ಹೊಣೆಯನ್ನು ಐಎಸ್‌ಎಸ್‌ನಲ್ಲಿರುವ ಮೆಗನ್‌ ಮ್ಯಾಕ್‌ ಅರ್ತರ್‌ ಅವರಿಗೆ ವಹಿಸಲಾಗಿತ್ತು.

Advertisement

ಇತ್ತೀಚೆಗೆ, ಮೆಣಸಿನ ಸಸಿಗಳಿಂದ ಮೆಣಸಿನ ಇಳುವರಿ ಪಡೆದ ನಂತರ ಆ ಮೆಣಸುಗಳನ್ನು ಬಳಸಿ, ಮೆಗನ್‌ ಅವರು ಮೆಕ್ಸಿಕೋದ ತಿನಿಸಾದ ಟ್ಯಾಕೋಗಳನ್ನು ತಯಾರಿಸಿದ್ದರು. ಅವುಗಳನ್ನು ಸವಿದ ಐಎಸ್‌ಎಸ್‌ ವಿಜ್ಞಾನಿಗಳು ಹಾಗೂ ಸಿಬ್ಬಂದಿ, ಮೆಣಸಿನ ಗುಣಮಟ್ಟ ಸರಿಯಾಗಿದೆ ಎಂದಿದ್ದಾರೆ. ಅಲ್ಲಿಗೆ, “ಪ್ಲಾಂಟ್‌ ಹ್ಯಾಬಿಟಟ್‌-4′ ಯೋಜನೆ ಯಶಸ್ವಿಯಾದಂತಾಗಿದೆ.

ಇದನ್ನು ಮೆಗಾನ್‌ ಹಾಗೂ ಅವರು ತಯಾರಿಸಿದ ಟ್ಯಾಕೋನ ಫೋಟೋ ಸಮೇತ, ನಾಸಾ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next