Advertisement

ಸಬರ್ಮತಿ ನದಿಯಲ್ಲಿ ನರ್ಮದೆಯ ನೀರು

06:00 AM May 06, 2018 | |

ಗಾಂಧೀಜಿ, ಅಹ್ಮದಾಬಾದ್‌, ಸಬರ್ಮತಿ ಈ ಮೂರೂ ಒಂದಕ್ಕೊಂದು ತಳಕು ಹಾಕಿಕೊಂಡಿರುವ ಸಂಗತಿಗಳು. ಒಂದರ ಕುರಿತ ವಿವರಣೆಯು ಇನ್ನೆರಡು ಸಂಗತಿಗಳ ಗೋಚರ, ಅಗೋಚರ ಎಳೆಗಳನ್ನು ಹಾಸುಹೊಕ್ಕಾಗಿಸಿಕೊಂಡಿರುತ್ತದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ಮರಳಿ ಬಂದಾಗ ಅಹ್ಮದಾಬಾದಿನ ಹೊರವಲಯದ ಕೊಚರಬ್‌ನಲ್ಲಿದ್ದ ತಮ್ಮ ವಕೀಲ ಗೆಳೆಯ ಜೀವನಲಾಲ್‌ ದೇಸಾಯಿ ಕೊಟ್ಟ ಜಾಗದಲ್ಲಿ ಆಶ್ರಮ ಮಾಡಿಕೊಳ್ಳುತ್ತಾರೆ. ಇದು ಮೊದಲ ಸತ್ಯಾಗ್ರಹ ಆಶ್ರಮ. ಗಾಂಧೀಜಿಯವರಿಗೆ ಆಶ್ರಮದ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡುಹೋಗಲು ಇದು ಚಿಕ್ಕದು ಎನ್ನಿಸುತ್ತಿತ್ತು. ಕೃಷಿ, ಜಾನುವಾರು ಸಾಕಣೆ, ಖಾದಿ ಪ್ರಯೋಗಗಳು ಇತ್ಯಾದಿಗಳನ್ನು ನಡೆಸಿಕೊಂಡು ಹೋಗಲು ವಿಶಾಲವಾದ ಸ್ಥಳಕ್ಕಾಗಿ ಅರಸುವಾಗ ಸಾಬರ್‌ಮತಿ ದಂಡೆಯಲ್ಲಿದ್ದ ಒಂದು ಜಾಗ ಅವರನ್ನು ಆಕರ್ಷಿಸಿತು. ಅದು ಜೈಲು ಮತ್ತು ಸ್ಮಶಾನದ ಮಧ್ಯೆ ಇದ್ದ ಬಂಜರು ನೆಲ. ನದಿ ದಡದ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಗಾಂಧೀಜಿಗೆ ಅವರದೇ ಕಾರಣವನ್ನು ಹೇಳುತ್ತಿದ್ದರು: “ಸತ್ಯ ಶೋಧನೆ ಮತ್ತು ನಿರ್ಭೀತಿಯನ್ನು ಬೆಳೆಸುವ ದಿಕ್ಕಿನಲ್ಲಿ ನಮ್ಮ ಚಟುವಟಿಕೆಗಳನ್ನು ನಡೆಸಲು ಇದೇ ಅತ್ಯಂತ ಸೂಕ್ತ ಸ್ಥಳ. ಯಾಕೆಂದರೆ, ಇದರ ಒಂದು ಪಕ್ಕದಲ್ಲಿ ವಿದೇಶೀಯರ ಕಬ್ಬಿಣದ ಸಂಕೋಲೆಯ ಜೈಲಿದೆ, ಇನ್ನೊಂದು ಕಡೆಯಲ್ಲಿ ಪ್ರಕೃತಿ ಮಾತೆ ವಜ್ರಾಘಾತ ನೀಡುವ ಸ್ಮಶಾನವಿದೆ !’

Advertisement

1917ರಲ್ಲಿ ಆಶ್ರಮವನ್ನು ಇಲ್ಲಿಗೆ ವರ್ಗಾಯಿಸಿದ ನಂತರ 1930ರವರೆಗೂ ಇದು ಸ್ವಾತಂತ್ರ್ಯ ಚಳುವಳಿಯ ಉಸಿರಾಗಿತ್ತು. ಆಶ್ರಮದ ಮಧ್ಯದಲ್ಲಿದ್ದ ಹೃದಯಕುಂಜದಲ್ಲಿ ಗಾಂಧೀಜಿ ಕಸ್ತೂರಿ ಬಾ ವಾಸವಿದ್ದರು. ಇದೇ ಸಬರ್ಮತಿ ದಂಡೆಯಿಂದ ಒಂದು ಹಿಡಿ ಮಣ್ಣು ಕೈಗೆತ್ತಿಕೊಂಡು ಹೊರಡುವ ಮೂಲಕ ಗಾಂಧೀಜಿಯವರ ದಂಡೀಯಾತ್ರೆ ಆರಂಭಗೊಂಡಿತ್ತು. |


ಸಬರ್ಮತಿ ಎಂಬ ಜೀವನಾಸರೆ
ಹೀಗೆ ಗಾಂಧೀ ಆಶ್ರಮದೊಂದಿಗೆ ಹಾಸುಹೊಕ್ಕಾಗಿರುವ ಸಬರ್ಮತಿ ನದಿ ಅಹ್ಮದಾಬಾದ್‌ ನಗರಕ್ಕೆ ತೀರಾ ಇತ್ತೀಚಿನವರೆಗೂ ಕುಡಿಯುವ ನೀರಿನ ಆಸರೆಯಾಗಿತ್ತು. ಗುಜರಾತಿನ ದೊಡ್ಡ ನದಿಯಾಗಿರುವ ಸಬರ್ಮತಿಯ ಉಗಮ ರಾಜಾಸ್ತಾನದ ಉದಯಪುರ ಜಿಲ್ಲೆಯಲ್ಲಿ ಅರಾವಳಿ ಶ್ರೇಣಿಯಲ್ಲಿರುವ ಧೇಬರ್‌ ಸರೋವರ. ರಾಜಸ್ಥಾನದಲ್ಲಿ 48 ಕಿ.ಮೀ. ಕ್ರಮಿಸುವ ಈ ನದಿ ಗುಜರಾತಿನಲ್ಲಿ 371 ಕಿ.ಮೀ. ಹರಿದು ಕ್ಯಾಂಬೆ ಕೊಲ್ಲಿಯಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಸುಮಾರು 80ರ ದಶಕದವರೆಗೂ ಸಬರ್ಮತಿಯ ನೀರು ಸಾಕಷ್ಟು ಸ್ವತ್ಛವಾಗಿಯೇ ಇತ್ತು. ಸುತ್ತಮುತ್ತಲ ಹಳ್ಳಿಗಳ ಒಡಲ ಮೇಲೆ ಬರೆ ಎಳೆದು ಗುಜರಾತಿಗಳ ಹೆಮ್ಮೆಯ ಕೈಗಾರಿಕಾ ನಗರವಾಗಿ ಅಹ್ಮದಾಬಾದ್‌ ಬೆಳೆಯುತ್ತ ಹೋಯಿತು. ಅದರೊಂದಿಗೆ ನದಿಗೆ ಸೇರುವ ಕೈಗಾರಿಕಾ ತ್ಯಾಜ್ಯದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತ ಹೋಯಿತು. ಅಹ್ಮದಾಬಾದ್‌ ನಗರದಿಂದ ವೌತಾವರೆಗಿನ 52 ಕಿ.ಮೀ. ನದಿ ಹರವು ಅತ್ಯಂತ ಮಾಲಿನ್ಯಗೊಂಡಿದೆ. ನದಿ ಮಾಲಿನ್ಯಕ್ಕೆ ಕೈಗಾರಿಕೆಗಳ ಕೊಡುಗೆ ಶೇ. 88 ಮತ್ತು ನಗರದ ಚರಂಡಿ ನೀರಿನ ಪಾಲು ಶೇ. 12. ಇದು ಮಳೆಯಾಧಾರಿತ ನದಿ. ಮಳೆ ಹೆಚ್ಚಾದಾಗ ಹುಚ್ಚು ಪ್ರವಾಹ, ಕಡಿಮೆಯಾದ ವರ್ಷದಲ್ಲಿ ಕ್ಯಾಂಬೆ ಕೊಲ್ಲಿ ತಲುಪುವ ಮೊದಲೇ ಒಣಗಿರುತ್ತದೆ. ವರ್ಷದಿಂದ ವರ್ಷಕ್ಕೆ ನದಿ ನೀರಿನ ಬಳಕೆಯೂ ಹೆಚ್ಚುತ್ತ ಬಂದಿದೆ; ಕೃಷಿಗಷ್ಟೇ ಅಲ್ಲ, ಕೈಗಾರಿಕೆಗಳಿಗೂ. 

“”ಈಗೊಂದು ಇಪ್ಪತ್ತೆçದು ವರ್ಷಗಳ ಹಿಂದೆ ಕುಡಿಯಲು ಸಬರ್ಮತಿ ನೀರನ್ನೇ ಬಳಸ್ತಾ ಇ¨ªೆವು. ನಾನು ಹೈಸ್ಕೂಲಿಗೆ ಹೋಗೋ ದಿನಗಳಲ್ಲಿ ನೀರು ಚೆನ್ನಾಗಿಯೇ ಇತ್ತು. ಮಳೆ ಕಡಿಮೆಯಾದ ವರ್ಷದಲ್ಲಿ ಆರು ತಿಂಗಳಾದರೂ ನೀರು ಇರಿ¤ತ್ತು. ಬರ್ತಾ ಬರ್ತಾ ಮಳೆಯೂ ಕಡಿಮೆಯಾಗ್ತಾ¤ ಬಂತು, ಕಾರ್ಖಾನೆಗಳು ಹೆಚ್ಚಾದವು, ಜನಸಂಖ್ಯೆ ಹೆಚ್ಚಾಯ್ತು, ಗಲೀಜು ನೀರನ್ನು ಹಂಗೆ ನದಿಗೆ ಬಿಟ್ಟರೆ ಇನ್ನೇನಾಗುತ್ತೆ… ಆಮೇಲಾಮೇಲೆ ಕುಡಿಯೋದಿರಲಿ, ಸ್ನಾನಕ್ಕೂ ಬಳಸಕ್ಕೆ ಆಗದ ಸ್ಥಿತಿ ಬಂತು. ಮಳೆಗಾಲದ ಮೂರು-ನಾಲ್ಕು ತಿಂಗಳು ಬಿಟ್ಟರೆ ಇನ್ನುಳಿದ ತಿಂಗಳುಗಳಲ್ಲಿ ಬರಿಯ ಚರಂಡಿ ನೀರು, ಕಾರ್ಖಾನೆಗಳ ನೀರು ಸಬರ್ಮತಿಯಲ್ಲಿ ಹರಿಯಲು ಶುರುವಾಯ್ತು” ಎಂದು ಆಶ್ರಮದ ಸುತ್ತಮುತ್ತ  ಆಟೋ ಓಡಿಸುವ ರಾಮಜೀಭಾಯಿ ನೆನಪಿಸಿಕೊಳ್ಳುತ್ತಾರೆ. 

90ರ ದಶಕದ ಕೊನೆಯಲ್ಲಿ ಮಾಲಿನ್ಯದ ಪ್ರಮಾಣ ಮಿತಿಮೀರಿದಾಗ ನಗರದೊಳಗಿನ ನದೀದಂಡೆಯನ್ನು ವಿಲಾಸೀ ಓಡಾಟದ, ಪ್ರವಾಸೀ ಆಕರ್ಷಣೆಯ ತಾಣವನ್ನಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ರೆಕ್ಕೆಪುಕ್ಕ ಮೂಡಿತು. ಸಬರ್ಮತಿ ರಿವರ್‌ಫ್ರಂಟ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಲಿಮಿಟೆಡ್‌ 1200 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಿತು. ಒಳಚರಂಡಿ ನೀರನ್ನು ಮತ್ತು ಕೈಗಾರಿಕೆಗಳ ಮಾಲಿನ್ಯದ ನೀರನ್ನು ಸಾಧ್ಯವಿದ್ದಷ್ಟು ಸಂಸ್ಕರಿಸಿ ನದಿಗೆ ಬಿಡುವುದು ಯೋಜನೆಯ ಒಂದು ಭಾಗ. ಇದೇನೋ ಶ್ಲಾಘನೀಯವೇ. ಆದರೆ ನಗರದೊಳಗಿನ ನದಿ ದಂಡೆಯ ಅಭಿವೃದ್ಧಿ ಎಂದರೆ ಇಷ್ಟೇ ಅಲ್ಲವಲ್ಲ. 11 ಕಿ.ಮೀ. ಉದ್ದದ ದಡದ ಎರಡೂ ಕಡೆ ಎರಡು ಹಂತದಲ್ಲಿ ಓಡಾಡಲು ಅಗಲ ದಾರಿ, ದಡದ ಮೇಲೆ ಅಂಗಡಿ ಮಳಿಗೆಗಳು, ಅಲ್ಲಲ್ಲಿ ಉದ್ಯಾನಗಳು… ಯುವಜನತೆಗೆ, ಮಕ್ಕಳಿಗೆ, ವಯಸ್ಸಾದವರಿಗೆ, ಪ್ರೇಮಿಗಳಿಗೆ, ಜೋಡಿಗಳಿಗೆ ಎಲ್ಲರ ಸಂಜೆ ಓಡಾಟಕ್ಕೆ ಚಿತ್ತಾಕರ್ಷಕವಾಗಿರಬೇಕು! 

ನರ್ಮದೆಯಿಂದ ಸಾಲ ತಂದ ನೀರು
ಆದರೇನು ಮಾಡುವುದು, ನದಿ ತುಂಬ ನೀರು ಇರುವುದೇ ಮೂರು-ನಾಲ್ಕು ತಿಂಗಳು, ಇನ್ನುಳಿದಂತೆ ಹರಿವು ಕಡಿಮೆ ಇರುತ್ತದೆಯಲ್ಲ. ಬೇಸಿಗೆಯಲ್ಲಂತೂ ಬರಿಯ ಚರಂಡಿಯ ಮತ್ತು ಕೈಗಾರಿಕೆಗಳ ಗಲೀಜು ನೀರು. ಗಾಂಧೀಜಿ ಆಶ್ರಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಸುಭಾಷ್‌ ಸೇತುವೆ ಕೆಳಗೆ ಒಂದು ಮೀಟರ್‌ ಆಳದಷ್ಟು ನೀರು ಇರಬೇಕು ಎಂದರೆ ನದಿಯಲ್ಲಿ ಅಕ್ಟೋಬರ್‌ನಿಂದ ಜೂನ್‌ವರೆಗೂ ಪ್ರತೀದಿನ 108ರಿಂದ 140 ದಶಲಕ್ಷ ಲೀಟರ್‌ ನೀರು ಹರಿಯುತ್ತಿರಬೇಕು. ಆಗ ರಿವರ್‌ಫ್ರಂಟ್‌ ಯೋಜನೆಯು ಕಣ್ಣು ಹಾಕಿದ್ದು ನರ್ಮದೆಯ ನೀರಿಗೆ. ಹೇಗಿದ್ದರೂ ಅಹ್ಮದಾಬಾದ್‌ ಪಕ್ಕದÇÉೇ ನರ್ಮದೆಯ ದೊಡ್ಡ ನಾಲೆ ಹರಿದುಹೊರಟಿತ್ತಲ್ಲ, ಆಧುನಿಕ ಭಗೀರಥರ ಹಠದೆದುರು ಸೋತು ಸುಣ್ಣವಾಗಿ. ಕಛ… ಸುತ್ತಮುತ್ತಲಿನ ರಣಭೂಮಿಗೆ ನೀರುಣ್ಣಿಸುವ, ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಇರುವ ನರ್ಮದಾ ನಾಲೆಯಿಂದ ನಗರ ಸೌಂದರ್ಯ, ಪ್ರವಾಸೀ ಆಕರ್ಷಣೆ, ಇತ್ಯಾದಿ ಉದ್ದೇಶದ ನದೀದಡ ಅಭಿವೃದ್ಧಿಗೆ ನೀರು ತಿರುಗಿಸುವುದು ಎಷ್ಟು ಸರಿ, ಅಹ್ಮದಾಬಾದ್‌ ನಗರಕ್ಕೆ ನರ್ಮದೆಯ ನೀರಿನ ಮೇಲೆ ಹಕ್ಕಿಲ್ಲ ಎಂದು ಕೆಲವೇ ಜನರು ಕೇಳಿದ ಪ್ರಶ್ನೆ ರಿವರ್‌ಫ್ರಂಟ್‌ ನಿಗಮದ ಕಿವಿಗೆ ಬೀಳುವುದಾದರೂ ಉಂಟೆ; ಅದೂ ಕೂಡ ಗುಜರಾತಿನ ಆಗಿನ ಮುಖ್ಯಮಂತ್ರಿಗಳೇ ಖುದ್ದು ಆಸ್ಥೆ ವಹಿಸಿದ ಬ್ಯೂಟಿಫಿಕೇಶನ್‌ ಪ್ರಾಜೆಕ್ಟ್ ಇದಾಗಿರುವಾಗ. 

Advertisement

“”ಹೀಗೆ ಕುಡಿಯುವ ಮತ್ತು ನೀರಾವರಿ ಉದ್ದೇಶದ ಒಂದು ನದಿ ನಾಲೆಯ ನೀರನ್ನು ಬರಿದಾಗಿಸಿದ ಇನ್ನೊಂದು ನದಿಗೆ ತಿರುಗಿಸುವುದು ನದಿ ಪುನಃಶ್ಚೇತನ ಯೋಜನೆಯಲ್ಲ, ಇದು ಬರಿಯ ಅಭಿವೃದ್ಧಿ ಯೋಜನೆ. ಇದರ ಬದಲಿಗೆ ನದಿಯ ಮೇಲಿನ ಜಲಾನಯನ ಪ್ರದೇಶದಲ್ಲಿ ಚಿಕ್ಕಚಿಕ್ಕ ಕೆರೆ ಒಡ್ಡುಗಳನ್ನು ನಿರ್ಮಿಸಿ, ಮಳೆ ನೀರನ್ನು ಹಿಡಿದುಕೊಟ್ಟುಕೊಳ್ಳಬೇಕು. ಕೃಷಿ ಬಳಕೆಗೆ ನದಿ ನೀರನ್ನು ಅವಲಂಬಿಸುವುದು ಸ್ವಲ್ಪ ಕಡಿಮೆಯಾಗುತ್ತದೆ. ನದಿಯ ಮೇಲ್ಭಾಗದ ಜಲಾನಯನ ಪ್ರದೇಶದ ಪುನಶ್ಚೇತನ ಮಾಡಿಡಬೇಕು. ಕೈಗಾರಿಕೆಗಳಿಗೆ ಅತಿಯಾಗಿ ನದಿನೀರನ್ನು ಬಳಸಲು ಕೊಡಬಾರದು. ಈ ರಿವರ್‌ಫ್ರಂಟ್‌ ಯೋಜನೆ ಖಂಡಿತವಾಗಿಯೂ ಸುಸ್ಥಿರ ಯೋಜನೆ ಅಲ್ಲವೇ ಅಲ್ಲ” ಎಂದು ನೀರು ತಜ್ಞ ರಾಜೇಂದ್ರ ಸಿಂಗ್‌ ಕಟುವಾಗಿ ಟೀಕಿಸಿದ್ದಿದೆ. 

ನಗರಿಗರ ಕಣ್ಣಿಗೆ ಅತ್ಯಾಕರ್ಷಕವೆಂದು ಕಾಣುವ, ಕೇಳಲು ಆಹಾ ಎನ್ನಿಸುವ ಈ ಅಭಿವೃದ್ಧಿ ಯೋಜನೆಗೆ ಇನ್ನೊಂದು ಕರಾಳಮುಖವೂ ಇದೆ. ಸಬರ್ಮತಿಯ ಆ ಹನ್ನೊಂದು ಕಿ.ಮೀ. ನದಿ ದಡ ಎಂದರೆ ಬರಿಯ ಖಾಲಿ ಜಾಗವಾಗಿರಲಿಲ್ಲ. ದಡದ ಮೇಲೆ ಉದ್ದಕ್ಕೂ ಸಾವಿರಗಟ್ಟಲೆ ಜೋಪಡಿಗಳು, ಗುಡಿಸಲುಗಳಿದ್ದವು. ನಗರದೊಳಗೆ ತಮ್ಮದೇ ಕಸುಬು ಕಟ್ಟಿಕೊಂಡಿದ್ದ ಸಾವಿರಾರು ಬಡತ್ರಾಣದ ಬದುಕುಗಳಿದ್ದವು. ಈ ಜೋಪಡಿಗಳು ವಿಶ್ವದರ್ಜೆಯ ರಿವರ್‌ಫ್ರಂಟ್‌ಗೆ ಕಣ್ಣು ಕಿಸುರಲ್ಲವೇ? ಬುಲ್ಡೋಜರ್‌ ತಂದು ಎಲ್ಲ ಜೋಪಡಿಗಳನ್ನು ಎತ್ತಂಗಡಿ ಮಾಡಿದಾಗ ನಗರಮಿತಿಯೊಳಗೆ ಹತ್ತುಸಾವಿರ ಕುಟುಂಬಗಳಿಗೆ ಮಾತ್ರ ಮನೆಗಳನ್ನು ಒದಗಿಸಿದ್ದರು. ಇನ್ನುಳಿದ ಸಾವಿರಗಟ್ಟಲೆ ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ಹಾಕಿಕೊಳ್ಳಲು ನಗರದ ದೂರದ ಹೊರಭಾಗವೇ ಗತಿಯಾಯಿತು. ಪ್ರತೀ ಮಳೆಗಾಲದಲ್ಲಿ ಅವರೆಲ್ಲರದು ನಾಯಿಪಾಡು. ಚಳಿಗಾಲದಲ್ಲಿ ಬೀಸುವ ಥಂಡಿಗಾಳಿಗೆ ನರಕಯಾತನೆ. ಪುನರ್ವಸತಿ ಕಲ್ಪಿಸಿದ ಕಡೆಯೂ ಸೂಕ್ಷ್ಮವಾಗಿ ಸಮುದಾಯಗಳು ವಿಭಜನೆಯಾಗುವುದಕ್ಕೆ ಕಾರಣವಾಯಿತು. ಮೊದಲು ದಡದ ಮೇಲಿನ ಸ್ಲಮ್‌ಗಳಲ್ಲಿ ದಲಿತ, ಮುಸ್ಲಿಂ ಕುಟುಂಬಗಳು ದಶಕಗಳಿಂದ ನೆರೆಹೊರೆಯವರಾಗಿದ್ದರು. ಆದರೆ, ಪುನರ್ವಸತಿ ಕಲ್ಪಿಸಿದಾಗ  ದಲಿತರ ಮನೆಗಳೆಲ್ಲ ಒಂದು ಕಡೆ, ಮುಸ್ಲಿಮರ ಮನೆಗಳು ಮತ್ತೂಂದೆಡೆಯಾಯಿತು. 

ಸಬರ್ಮತಿ ದಡದ ಆಶ್ರಮದಲ್ಲಿ ಗಾಂಧೀಜಿಯವರು ಕೊನೆಯ ಭಾಷಣ ಮಾಡಿದ್ದು 1930, ಮಾರ್ಚ್‌ 11ರ ಸಂಜೆ, ಅದರ ಮರುದಿನ ದಂಡಿ ಸತ್ಯಾಗ್ರಹ ಆರಂಭವಾಯಿತು.  ಸ್ವಾತಂತ್ರ್ಯ ಸಿಕ್ಕ ನಂತರವೇ ಸಬರ್ಮತಿ ಆಶ್ರಮಕ್ಕೆ ಮತ್ತೆ ಕಾಲಿಡುತ್ತೇನೆ ಎಂದು 1930, ಮಾರ್ಚ್‌ 12ರ ಬೆಳಗ್ಗೆ ಹೊರಟ ಗಾಂಧೀಜಿ ಸಬರ್ಮತಿ ದಡಕ್ಕೆ ಕೊನೆಗೂ ಮರಳಲೇ ಇಲ್ಲ. ಸ್ವಾತಂತ್ರ್ಯವೇನೋ 1947ರಲ್ಲಿ ಬಂದಿತು ನಿಜ, ಆದರೆ ಅದಾದ ಮರುವರ್ಷವೇ ಗೋಡ್ಸೆಯ ಗುಂಡುಗಳು ಗಾಂಧೀಜಿಯವರ ದೇಹವನ್ನು ಛಿದ್ರಗೊಳಿಸಿದ್ದವು. ನಂತರದ ವರ್ಷಗಳಲ್ಲಿ ಸ್ವತಂತ್ರ ಭಾರತದ ಈ ಪರಿಯ ಕುರುಡು ಅಭಿವೃದ್ಧಿಯನ್ನು ಕಾಣುತ್ತ ಅವರ ಅಳಿದುಳಿದ ಆತ್ಮವೂ ಛಿದ್ರಗೊಂಡಿರಬೇಕು. ಏಳಿಗೆ ಎಂದರೆ ಸಮಾಜದ ಅತ್ಯಂತ ಕಟ್ಟಕಡೆಯ ಜನರಿಗೆ ತಲುಪಬೇಕೆಂದು ಪ್ರತಿಪಾದಿಸುತ್ತಿದ್ದ ಗಾಂಧೀಜಿ ಹೀಗೆ 1200 ಕೋಟಿ ರೂ. ವೆಚ್ಚದ ವೈಭವೋಪೇತ ಅತ್ಯಾಧುನಿಕ ರಿವರ್‌ಫ್ರಂಟ್‌ ಯೋಜನೆಗಾಗಿ ಸಾವಿರಾರು ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವುದನ್ನು ಸಹಿಸುತ್ತಿದ್ದರೆ? ಒಂದು ಕಾಲಕ್ಕೆ ಗಾಂಧೀಜಿಯ ಸರಳ ಬದುಕಿಗೆ, ಗ್ರಾಮ ಸ್ವರಾಜ್ಯದ ಕನಸಿಗೆ ನೀರೆರೆದ ಸಬರ್ಮತಿ ಎಲ್ಲಿದ್ದಾಳೀಗ? ಅಲ್ಲೀಗ ನರ್ಮದೆಯಿಂದ ಕಡ ತಂದ ನೀರು ಮತ್ತು ಎತ್ತಂಗಡಿಗೊಂಡ ಸೂರಿಲ್ಲದ ಸಾವಿರಾರು ಜನರ ಕಣ್ಣೀರು ದಡದುದ್ದ. 

ಸುಮಂಗಲಾ

Advertisement

Udayavani is now on Telegram. Click here to join our channel and stay updated with the latest news.

Next