Advertisement
ರವಿವಾರ ಸಂಜೆ ನರಿಮೊಗರು ಜಂಕ್ಷನ್ ಬಳಿ ಪುತ್ತೂರು ನಗರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಮುಂಡೂರು ಗ್ರಾ.ಪಂ., ಮೃತ್ಯುಂಜಯೇಶ್ವರ ದೇವಸ್ಥಾನ ಮುಂಡೂರು, ಸಂಘಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಅಳವಡಿಸಲಾದ ಸಿ.ಸಿ. ಕೆಮರಾ ಹಾಗೂ ಹೈಮಾಸ್ಟ್ ವಿದ್ಯುದ್ದೀಪ ಮತ್ತು ಸಹಕಾರಿ ಧುರೀಣ ದಿ| ಗಣಪತಿ ಶೆಣೈ ಹೆಸರಿನಲ್ಲಿ ಸಾರ್ವಜನಿಕರ ವತಿಯಿಂದ ರಚಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾ.ಪಂ. ಸದಸ್ಯ ಶಿವರಂಜನ್ ಮಾತನಾಡಿ, 8 ಕಡೆಗಳಲ್ಲಿ 30 ಸಿಸಿ ಕೆಮರಾವಮನ್ನು ಅಳವಡಿಸುವ ಮೂಲಕ ಬೀಟ್ ಪೊಲೀಸ್ ಯಾವ ರೀತಿಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬಹುದು ಎಂಬುದನ್ನು ನರಿಮೊಗರು ಬೀಟ್ ಪೊಲೀಸ್ ಹರೀಶ್ ತೋಟತ್ತಡ್ಕ ಅವರು ತೋರಿಸಿಕೊಟ್ಟಿದ್ದಾರೆ. ಇವರು ಜಿಲ್ಲೆಯಲ್ಲೇ ಅತ್ಯುತ್ತಮ ಬೀಟ್ ಪೊಲೀಸ್ ಎಂದು ಅಭಿನಂದಿಸಿದರು. ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿ ಮಾತನಾಡಿ, ಗಣಪತಿ ಶೆಣೈ ಅವರ ಮಾರ್ಗದರ್ಶನದಲ್ಲಿ ಬೆಳೆದವರು ನಾವು. ಅವರ ಹೆಸರಿನಲ್ಲಿ ಬಸ್ ತಂಗುದಾಣ ನಿರ್ಮಾಣವಾದದ್ದು ಉತ್ತಮ ವಿಚಾರ ಎಂದರು.
Related Articles
ಪುತ್ತೂರು ವೃತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾತನಾಡಿ, ಸಿಸಿ ಕೆಮರಾ, ಹೈಮಾಸ್ಟ್ ದೀಪ ಅಳವಡಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಇಲಾಖೆಯ ಜತೆ ಸಾರ್ವಜನಿಕರ ಸಹಕಾರವಿದ್ದರೆ ಉತ್ತಮ ಕಾರ್ಯನಿರ್ವಹಣೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್.ಡಿ. ಮಾತನಾಡಿ, ಜನಸ್ನೇಹಿ ಅಧಿಕಾರಿಗಳಿಂದ ಜನೋಪಯೋಗಿ ಕಾರ್ಯ ಮಾಡಬಹುದು ಎಂಬುದನ್ನು ಬೀಟ್ ಪೊಲೀಸ್ ಹರೀಶ್ ತೋರಿಸಿಕೊಟ್ಟಿದ್ದಾರೆ ಎಂದರು.
Advertisement
ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ನರಿಮೊಗರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ, ಮುಂಡೂರು ಮೃತ್ಯುಂಜಯೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಪುತ್ತೂರು ನಗರ ಠಾಣೆ ಎಎಸ್‌ಐ ಶ್ರೀಧರ್, ತಾ.ಪಂ. ಮಾಜಿ ಸದಸ್ಯ ಮೋಹನ್ ರೈ ಉಪಸ್ಥಿತರಿದ್ದರು.
ಬಸ್ ತಂಗುದಾಣ ಸಹಿತ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕೆ. ಇಬ್ರಾಹಿಂ, ಬಿ.ಎಂ. ಇಬ್ರಾಹಿಂ, ಹರೀಶ್ ಪೂಜಾರಿ, ಇಸುಬು, ನಾಸಿರ್, ಜಯಂತ ಗೌಡ, ಶಿವಪ್ರಸಾದ್ ಬಜಪ್ಪಳ, ಇಸಾಕ್ ಮುಕ್ವೆ ಹಾಗೂ ನರಿಮೊಗರು ಸಿಎ ಬ್ಯಾಂಕ್ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸಾರ್ವಜನಿಕರು ಬೀಟ್ ಪೊಲೀಸ್ ಹರೀಶ್ ಅವರನ್ನು ಸಮ್ಮಾನಿಸಿದರು. ಧನಂಜಯ ಗೌಡ, ಅಶ್ವಿನಿ ಬಿ.ಕೆ., ಉಸ್ಮಾನ್ ನೆಕ್ಕಿಲು, ಪ್ರಕಾಶ್ ಗೌಡ ಸೇರಾಜೆ, ನವೀನ್ ರೈ ಶಿಬರ, ವೇದನಾಥ ಸುವರ್ಣ, ದಿನೇಶ್ ಗೌಡ ಮಜಲು, ಕೃಷ್ಣ ಸಾಲ್ಯಾನ್ ಅತಿಥಿಗಳನ್ನು ಗೌರವಿಸಿದರು.
ಸುಭಾಶ್ಚಂದ್ರ ಶೆಣೈ ಬಜಪ್ಪಳ ಸ್ವಾಗತಿಸಿದರು. ಪ್ರವೀಣ್ ನಾೖಕ್ ಸೇರಾಜೆ ಪ್ರಸ್ತಾವನೆಗೈದರು. ಸ್ವಾತಿ ಪ್ರಾರ್ಥಿಸಿದರು. ಜಯರಾಮ ಗೌಡ ಸೇರಾಜೆ ವಂದಿಸಿದರು.ನರಿಮೊಗರು ಗ್ರಾ.ಪಂ. ಸದಸ್ಯ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.