Advertisement
ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಕೃಷಿ ಇಲಾಖೆಯ ಮುಂದಾಳತ್ವದಲ್ಲಿ ಜ.20ರಿಂದ 3 ದಿನಗಳ ಕಾಲ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ – 2023 ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ಒಡಂಬಡಿಕೆಗಳಿಗೆ ಸಹಿಮೇಳದಲ್ಲಿ ಸುಮಾರು 202 ಕೋಟಿ ರೂ. ಮೌಲ್ಯದ 43 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. 139 ಸಭೆಗಳು ನಡೆದಿದೆ. ದೇಶ ವಿದೇಶಗಳ 68 ಮಾರುಕಟ್ಟೆದಾರರು, 59 ಉತ್ಪಾದಕರು ಭಾಗಿಯಾಗಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. 19,214 ಮೆಟ್ರಿಕ್ ಟನ್ ಉತ್ಪನ್ನಗಳ ವಹಿವಾಟು ನಡೆದಿದೆ.
ಸಿರಿಧಾನ್ಯ ಮತ್ತು ಸಿರಿಧಾನ್ಯ ವರ್ಧಿತ ಉತ್ಪನ್ನಗಳಿಗೆ ಗರಿಷ್ಠ ಮಾರುಕಟ್ಟೆ ಲಭಿಸಿದೆ. ಉಳಿದಂತೆ ಕ್ರಮವಾಗಿ ಸಾಂಬಾರು ಪದಾರ್ಥಗಳು, ಬೇಳೆಕಾಳು, ಬೆಲ್ಲ ಮತ್ತು ಬೆಲ್ಲದ ಉತ್ಪನ್ನಗಳು, ಎಣ್ಣೆ ಮತ್ತು ಎಣ್ಣೆಕಾಳುಗಳಿಗೆ ಹೆಚ್ಚಿನ ಮಾರುಕಟ್ಟೆ ಲಭಿಸಿದೆ. ದಾವಣಗೆರೆ, ಬಾಗಲಕೋಟೆ, ಕೋಲಾರ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳು ಗರಿಷ್ಠ ವಹಿವಾಟು ನಡೆಸಿವೆ.