Advertisement

ನಾಸಿಕ್‌ ನಲ್ಲಿಂದು ಪ್ರಧಾನಿ ಮೋದಿ ಮೆಗಾ ರ್ಯಾಲಿ

09:47 AM Sep 20, 2019 | Team Udayavani |

ನಾಸಿಕ್:‌ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಮೆಗಾ ರಾಲಿಯಲ್ಲಿ ಭಾಷಣ ಮಾಡಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಲಿದೆ.

Advertisement

ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರ ʼ ಮಹಾಜನಾದೇಶ ಯಾತ್ರೆʼಗೆ  ಇಂದಿನಿಂದ ಅಧಿಕೃತ ಚಾಲನೆ ನರೇಂದ್ರ ಮೋದಿಯವರ ಭಾಷಣದಿಂದ ಸಿಗಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ನಾಸಿಕ್‌ ನ ತಪೋವನ ಮೈದಾನದಲ್ಲಿ ನರೇಂದ್ರ ಮೋದಿ ಜನರನ್ನು ಉದ್ದೇಶಿಸಿ ಭಾಷನ ಮಾಡಲಿದ್ದಾರೆ.

ನಾಸಿಕ್‌ ಗೆ ಮೋದಿ ನೀಡುತ್ತಿರುವ ಎರಡನೇ ಭೇಟಿ ಇದಾಗಿದ್ದು, ಈ ಮೊದಲು 2014ರಲ್ಲಿ ಇದೇ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next