Advertisement

ಭಾರತ ಸಂಬಂಧ ಕೆಡಲು ಮೋದಿ ಪಾಕ್‌ ವಿರೋಧಿ ನೀತಿ ಕಾರಣ: ಇಮ್ರಾನ್‌ ಖಾನ್‌

07:48 PM Jul 05, 2018 | udayavani editorial |

ಇಸ್ಲಾಮಾಬಾದ್‌ : ಭಾರತ ಜತೆಗಿನ ಪಾಕ್‌ ಸಂಬಂಧಗಳು ಇಷ್ಟೊಂದು ಹಳಸಲು ಕಾರಣವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ “ಆಕ್ರಮಣಕಾರಿ ಪಾಕ್‌ ವಿರೋಧಿ ನೀತಿ’ ಎಂದು ಪಾಕಿಸ್ಥಾನ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ, ಇಮ್ರಾನ್‌ ಖಾನ್‌ ಡಾನ್‌ ನ್ಯೂಸ್‌ ಗೆ ಹೇಳಿದ್ದಾರೆ. 

Advertisement

ಭಾರತದ ಜತೆಗಿನ ಸಂಬಂಧವನ್ನು ಸುಧಾರಿಸಲು ಹಿಂದಿನ ಪ್ರಧಾನಿ ನವಾಜ್‌ ಷರೀಫ್ ಅವರು ತನ್ನಿಂದಾದ ಗರಿಷ್ಠ ಪ್ರಯತ್ನಗಳನ್ನು ಮಾಡಿದ್ದಾರೆ; ಆದರೆ ಭಾರತ ಸರಕಾರದ “ಆಕ್ರಮಣಕಾರಿ ಪಾಕ್‌ ವಿರೋಧಿ ನೀತಿ’ಯಿಂದಾಗಿ ಉಭಯ ದೇಶಗಳ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ ಎಂದು ಇಮ್ರಾನ್‌ ಖಾನ್‌ ಹೇಳಿದರು. 

ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ಎಲ್ಲ ದೌರ್ಜನ್ಯಗಳಿಗೆ ಪಾಕಿಸ್ಥಾನವೇ ಕಾರಣ ಎಂದು ದೂರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ “ಆಕ್ರಮಣಕಾರಿ ಪಾಕ್‌ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ’ ಎಂದು ಇಮ್ರಾನ್‌ ಆಪಾದಿಸಿದರು. 

ಪಾಕಿಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಪ್ರತ್ಯೇಕಗೊಳಿಸುವ ಭಾರತೀಯ ಜನತಾ ಪಕ್ಷ ನೇತೃತ್ವದ ಭಾರತ ಸರಕಾರದ ತಪ್ಪು  ನೀತಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿಹೋಗಿವೆ ಎಂದು ಇಮ್ರಾನ್‌ ದೂರಿದರು. 

Advertisement

Udayavani is now on Telegram. Click here to join our channel and stay updated with the latest news.

Next